HEALTH TIPS

ವೇತನ ಸುಧಾರಣೆಯಲ್ಲಿ ಅಸಮರ್ಪಕತೆ: ಸೆಕ್ರೆಟರಿಯೇಟ್ ಮುಂದೆ ಸರ್ಕಾರಿ ವೈದ್ಯರಿಂದ ಉಪವಾಸ ಸತ್ಯಾಗ್ರಹ

                   ತಿರುವನಂತಪುರಂ: ರಾಜ್ಯದ ಸರ್ಕಾರಿ ವೈದ್ಯರು ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ. ವೇತನ ಸುಧಾರಣೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ. ನಾಲ್ಕನೇ ದಿನದಿಂದ ಅಸಹಕಾರ ಮುಷ್ಕರ ಆರಂಭಿಸಲು ಕೂಡ ನಿರ್ಧರಿಸಿದೆ. ಮುಷ್ಕರವು ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕೆಜಿಎಂಒಎ ನೇತೃತ್ವದಲ್ಲಿ ಸೆಕ್ರೆಟರಿಯಟ್ ಎದುರು ಉಪವಾಸ ಸತ್ಯಾಗ್ರಹವನ್ನು ನಿನ್ನೆ ಆರಂಭಿಸಿದೆ. ಕೊರೋನಾ ಪೆÇ್ರೀಟೋಕಾಲ್‍ಗಳಿಗೆ ಅನುಸಾರವಾಗಿ ಉಪವಾಸವನ್ನು ಆಚರಿಸಲು ರಾಜ್ಯ ಸಮಿತಿಯ ಸದಸ್ಯರಿಗೆ ಮಾತ್ರ ಅನುಮತಿಸಲಾಗಿದೆ.

                    ಕೇಂದ್ರ ಆರೋಗ್ಯ ಸಚಿವಾಲಯದ ಟೆಲಿ-ಮೆಡಿಸಿನ್ ವ್ಯವಸ್ಥೆಯಾದ ಇ-ಸಂಜೀವನಿಯಿಂದ ವೈದ್ಯರು ದೂರವಿರುತ್ತಾರೆ. ಇದರ ಜೊತೆಗೆ, ವೈದ್ಯರು ಆನ್‍ಲೈನ್‍ನಲ್ಲಿ ನಿಗದಿಪಡಿಸಿದ ಸಭೆಗಳು ಮತ್ತು ತರಬೇತಿಗಳನ್ನು ಬಹಿಷ್ಕರಿಸುತ್ತಾರೆ. ವೈದ್ಯರು ಕೊರೋನಾ ಕರ್ತವ್ಯಗಳಿಗೆ ಗೈರುಹಾಜರಾಗುತ್ತಾರೆ. ವೇತನ ಸುಧಾರಣೆಯು ಪ್ರಮಾಣಾನುಗುಣವಾದ ಹೆಚ್ಚಳಕ್ಕೆ ಬದಲಾಗಿ ಸಂಬಳವನ್ನು ಕಡಿತಗೊಳಿಸಿದೆ ಎಂಬುದು ಮುಖ್ಯ ಆರೋಪವಾಗಿದೆ. ವೈದ್ಯರು, ವೇತನ ಪರಿಷ್ಕರಣೆಯಲ್ಲಿ ಪ್ರವೇಶ ಕೇಡರ್‍ನಲ್ಲಿ ಮೂಲ ವೇತನವನ್ನು ಕಡಿತಗೊಳಿಸಿರುವುದು, ವೈಯಕ್ತಿಕ ವೇತನವನ್ನು ರದ್ದುಗೊಳಿಸಿರುವುದು, ಅನುಪಾತದ ಬಡ್ತಿಗಳನ್ನು ರದ್ದುಗೊಳಿಸಿರುವುದು, ವೃತ್ತಿ ಪ್ರಗತಿ ಯೋಜನೆಗಳನ್ನು ಆದೇಶಿಸದಿರುವುದು ಮತ್ತು ಅಪಾಯ ಭತ್ಯೆಗಳಂತಹ ಹಲವಾರು ಸಮಸ್ಯೆಗಳನ್ನು ಸೂಚಿಸುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries