ಕಾಸರಗೋಡು: ವಿದ್ಯಾರ್ಥಿಗಳಿಗೆ ಮತ್ತು ಮನೆಗಳಿಂದಲೇ ಕರ್ತವ್ಯ ನಡೆಸುವ ಮಂದಿಗೆ ಸಹಾಯಕವಾಗುವ ರೀತಿಯ ಡಿಜಿಟಲ್ ಯೋಜನೆಯೊಂದಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಕಡಿಮೆ ವೆಚ್ಚದ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ.
ಜಿಲ್ಲಾ ಪಂಚಾಯತ್ ನ ಸಹಾಯದೊಂದಿಗೆ ಕೇರಳ ವಿಷನ್ ಸಂಸ್ಥೆ ನೂತನ ಇಂಟರ್ ನೆಟ್ ಯೋಜನೆ ಘೋಷಿಸಿದೆ. ಒಂದು ತಿಂಗಳೊಳಗೆ ಸಂಪರ್ಕ ಪಡೆಯುವ ಗ್ರಾಹಕರಿಗೆ ಇ ಸೌಲಭ್ಯ ದೊರೆಯಲಿದೆ. 60 ಎಂ.ಬಿಒ.ಪಿ.ಎಸ್. ವೇಗದಲ್ಲಿ 1500 ಜಿ.ಬಿ. ಪ್ರತಿತಿಂಗಳ ಪ್ಲಾನ್ ಜೊತೆಗೆ ಅನಿಯಂತ್ರಿತ ವಾಯ್ಸ್ ಕಾಲ್ ಉಚಿತ ರೂಪದಲ್ಲಿ ಲಭಿಸಲಿದೆ. ವಿದ್ಯಾರ್ಥಿಗಳಿರುವ ಮನೆಗಳ ಸಂಪರ್ಕವಾಗಿದ್ದಲ್ಲಿ 240 ರೂ.ನ ಡಿಜಿಟಲ್ ಕೇಬಲ್ ಟಿ.ವಿ.ಸೇವೆ 6 ತಿಂಗಳ ಅವಧಿಗೆ 90 ರೂ.ನ ಕಡಿತದೊಂದಿಗೆ 1509 ರೂ.ದರದಲ್ಲಿ ಲಭಿಸಲಿದೆ. ಆಪ್ಟಿಕಲ್ ಫೈಬರ್ ಕೇಬಲ್ ಮೂಲಕದ ಇಂಟರ್ ನೆಟ್ ಸಂಪರ್ಕ ಪಡೆಯಲು 3 ಸಾವಿರ ರೂ.ನಿಂದ 5 ಸಾವಿರ ರೂ. ವರೆಗಿನ ನೂತನ ಯೋಜನೆ ಗಮನಾರ್ಹವಾಗಿದೆ. ಜಿಲ್ಲೆಯಲ್ಲಿ 200 ಕ್ಕೂ ಅಧಿಕ ಆಪರೇಟರ್ ಗಳು, ಜಿಲ್ಲಾ ಕಂಪನಿ ಸಿ.ಸಿ.ಎನ್., 50 ಲಕ್ಷ ರೂ. ಇದಕ್ಕಾಗಿ ವೆಚ್ಚಮಾಡಿದೆ.
ಕಡಿಮೆ ವೆಚ್ಚದಲ್ಲಿ ಇಂಟರ್ ನೆಟ್ ಸೌಲಭ್ಯ ಎಂಬ ಕಾಸರಗೋಡು ಜಿಲ್ಲಾ ಪಂಚಾಯತ್ ನ ಆದೇಶದಂತೆ ಕೇರಳ ವಿಷನ್ ಸಂಸ್ಥೆ ಈ ನೂತನ ಯೋಜನೆ ಜಾರಿಗೊಳಿಸುತ್ತಿದೆ. ಜಿಲ್ಲೆಯನ್ನು ಸಂಪೂರ್ಣ ಡಿಜಿಟಲ್ ಗ್ರಾಮವಾಗಿಸುವ ಉದ್ದೇಶವನ್ನು ಈ ಮೂಲಕ ಈಡೇರಿಸಲಾಗುತ್ತದೆ.
ಈ ಸಂಬಂಧ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಯೋಜನೆಯನ್ನು ಉದ್ಘಾಟಿಸಿದರು. ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಸರಿತಾ ಎಸ್.ಎನ್., ಸಿ.ಸಿ.ಎನ್.ಅಧ್ಯಕ್ಷ ಕೆ.ಪ್ರದೀಪನ್, ಉಪಾಧ್ಯಕ್ಷ ಶುಕೂರ್ ಕೋಳೀಕ್ಕರ, ಕೆ.ಸಿ.ಸಿ.ಎನ್. ನಿರ್ದೇಶಕ ಎಂ.ಲೋಹಿತಾಕ್ಷನ್, ಸಿ.ಒ.ಎ.ಜಿಲ್ಲಾ ಅಧ್ಯಕ್ಷ ಎಂ.ಮನೋಜ್ ಕುಮಾರ್, ಕಾರ್ಯದರ್ಶಿ ಎಂ.ಆರ್.ಅಜಯನ್, ಸಿ.ಒ.ಎ. ರಾಜ್ಯ ಸಮಿತಿ ಸದಸ್ಯ ಸತೀಶನ್ ಕೆ.ಪಾಕಂ, ಸಿಲಸಿ.ಎನ್. ನಿರ್ದೇಶಕರಾದ ಅಬ್ದುಲ್ಲ ಕುಂuಟಿಜeಜಿiಟಿeಜ, ವಿ.ವಿ.ಮನೋಜ್ ಕುಮಾರ್, ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು.