ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ವಿಂಶತಿ ಉತ್ಸವದ ಅಂಗವಾಗಿ ಸಮಾಜ ಸೇವಕ, ಕನ್ನಡದ ಪೆÇೀಷಕ ತೆಕ್ಕೇಕರೆ ಶಂಕರನಾರಾಯಣ ಭಟ್ ಅವರಿಗೆ ಗುರು ನಮನ ನೆಲಕ್ಕಳ ಭಟ್ಸ್ ನಗರದ ಅವರ ಸ್ವಗೃಹದಲ್ಲಿ ನಡೆಯಿತು.
ಕನ್ನಡ ಭವನದ ಸ್ಥಾಪಕ ವಾಮನ ರಾವ್ ಬೇಕಲ್, ಸಂಧ್ಯಾರಾಣಿ ಅವರು ಟಿ.ಶಂಕರನಾರಾಯಣ ಭಟ್ ದಂಪತಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸಮ್ಮಾನಿಸಿ ಗೌರವಿಸಿದರು.
ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಶಂಕರನಾರಾಯಣ ಭಟ್ ಅವರ ಸಾಧನೆ, ಸಮಾಜ ಸೇವೆ, ಕನ್ನಡ ಪೋಷಣೆ ಮೊದಲಾದ ರಂಗಕ್ಕೆ ನೀಡಿದ ಕೊಡುಗೆ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.
ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಸತೀಶ್ ಕೂಡ್ಲು, ವಸಂತ ಕೆರೆಮನೆ, ಪತ್ರಕರ್ತರಾದ ಜಗನ್ನಾಥ, ಪ್ರದೀಪ್ ಬೇಕಲ್, ನಿವೃತ್ತ ಅಧ್ಯಾಪಕಿ ಶಶಿಕಲ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ಸ್ಥಾಪಕ ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಜಗದೀಶ್ ಕೂಡ್ಲು ವಂದಿಸಿದರು.