ಕಾಸರಗೋಡು: ಕೂಡ್ಲು ಸಮೀಪದ ಬಾದಾರದಲ್ಲಿರುವ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿಯುವಕ ಹಾಗು ಮಹಿಳಾ ಸಂಘದ ಸಹಕಾರದೊಂದಿಗೆ ದೇವಸ್ಥಾನದ ಬಯಲಲ್ಲಿ ನಡೆಸಿದ ಭತ್ತದ ಕೃಷಿಯ ಕೊಯ್ಲು ಉತ್ಸವ ಜರುಗಿತು.
ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು ಭತ್ತದ ಕೊಯ್ಲು ಉದ್ಘಾಟಿಸಿದರು. ಟ್ರಸ್ಟ್ ಕೋಶಾಧಿಕಾರಿ ಸುರೇಶ್ ನಾಯ್ಕ್, ಟ್ರಸ್ಟ್ ಸದಸ್ಯರಾದ ಗೋಪಾಲಕೃಷ್ಣ ಪಾಂಚಜನ್ಯ, ಶರತ್ ನಾಯ್ಕ್, ಸುನಂದ ಹಾಗು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಅಧ್ಯಕ್ಷೆ ರತ್ನ ಪಾಯಿಚ್ಚಾಲ್ , ಮತ್ತು ಸದಸ್ಯರು,ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘದ ಸದಸ್ಯರು, ಭತ್ತದಕೃಷಿಯ ಸಂಚಾಲಕ ರಾಜೇಂದ್ರ,ಮುಂತಾದವರು ನೇತೃತ್ವ ವಹಿಸಿದರು.