ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇಲೆ ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿಯವರ ಮೊಮ್ಮಗನನ್ನು ಶನಿವಾರ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಲಾನಿ ಮೊಮ್ಮಗ ಹಾಗೂ ಅಲ್ತಾಫ್ ಅಹ್ಮದ್ ಶಾ ಅಲಿಯಾಸ್ ಅಲ್ತಾಫ್ ಫಂತೂಷ್ ಅವರ ಮಗನಾದ ಅನೀಸ್-ಉಲ್-ಇಸ್ಲಾಂ ಅವರನ್ನು ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ವಿಶೇಷ ನಿಬಂಧನೆಗಳನ್ನು ಬಳಸಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
2016ರಲ್ಲಿ ಅನೀಸ್, ಶೇರ್-ಇ-ಕಾಶ್ಮೀರ ಅಂತರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಸಂಶೋಧನಾ ಅಧಿಕಾರಿಯಾಗಿ ನೇಮಕಗೊಂಡಿದ್ದರು.