ನವದೆಹಲಿ :ಮುಂದಿನ ವರ್ಷ ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್‌ಗಳು ಅಗತ್ಯವಾಗಬಹುದು. ಮೊದಲ ಎರಡು ಡೋಸ್‌ಗಳು ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವಿನಿಂದ ಎಷ್ಟು ಕಾಲ ರಕ್ಷಿಸುತ್ತವೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದು ದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಶನಿವಾರದಂದು NDTVಗೆ ತಿಳಿಸಿದರು.
ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆಯೂ ಚರ್ಚಿಸಿದ ಏಮ್ಸ್ ಮುಖ್ಯಸ್ಥರು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಅಮೆರಿಕದಂತಹ ಇತರ ದೇಶಗಳು ಮಕ್ಕಳ ಲಸಿಕೆ ಶಿಫಾರಸು ಮಾಡಿದ್ದು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದರು.
" ಬೂಸ್ಟರ್‌ಗಳಿಗಾಗಿ ಟೈಮ್‌ಲೈನ್ ಕುರಿತು ನಮಗೆ ಇನ್ನೂ ಖಚಿತವಾದ ಉತ್ತರವಿಲ್ಲ. ನಾವು ಪ್ರತಿಕಾಯಗಳ ಆಧಾರದ ಮೇಲೆ ಬೂಸ್ಟರ್ ಗಳನ್ನು ನೀಡಲು ನಿರ್ಧರಿಸಲು ಸಾಧ್ಯವಿಲ್ಲ... ಅದು ಸಮಯವನ್ನು ಆಧರಿಸಿರಬೇಕು ಅಂದರೆ ಎರಡನೇ ಡೋಸ್ ಪಡೆದು ನೀವು ಎಷ್ಟು ಸಮಯ ಕಳೆದಿವೆ ಎನ್ನುವುದು ಗಣನೆಗೆ ಬರುತ್ತದೆ. ಸಾಮಾನ್ಯವಾಗಿ ಒಂದು ವರ್ಷದ ನಂತರ ನಾವು ಬೂಸ್ಟರ್ ಲಸಿಕೆಗಳತ್ತ ಚಿತ್ತ ಹರಿಸಲು ಪ್ರಾರಂಭಿಸಬಹುದು" ಎಂದು ಅವರು ಹೇಳಿದರು.