ನ್ಯೂಯಾರ್ಕ್: ಪ್ರೀತಿಗಾಗಿ ಏನೆಲ್ಲಾ ತ್ಯಾಗ ಮಾಡುತ್ತಾರೆ. ಜೀವವನ್ನೇ ಬಲಿಕೊಡುವವರೂ ಇದ್ದಾರೆ. ಆದರೆ ಇಲ್ಲೊಬ್ಬ ಪ್ರೇಯಸಿ ಮಾಡಿರುವ ಕಥೆ ಕೇಳಿದ್ರೆ ನಗುತ್ತೀರೋ, ಥೂ ಅನ್ನುತ್ತೀರೋ, ಭೇಷ್ ಅನ್ನುತ್ತೀರೋ ಅವರವರ ಭಾವಕ್ಕೆ ಬಿಟ್ಟ ವಿಷಯ.
ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಟಿಕ್‌ಟಾಕ್ ಯೂಸರ್ ಆಮ್ರಿ ಎಂಬಾಕೆಯ ಕಥೆಯಿದು. ಅದನ್ನು ಅವಳೇ ಜಾಲತಾಣದಲ್ಲಿ ಬಂದು ಖುದ್ದಾಗಿ ಹೇಳಿಕೊಂಡಿದ್ದಾಳೆ.
ಅದೇನೆಂದರೆ ಈಕೆಯ ಪ್ರಿಯತಮ ಜೆಸ್ ಪ್ರೀತಿಯ ಅಮ್ಮನ ಕಳೆದುಕೊಂಡಿದ್ದನಂತೆ. ತುಂಬಾ ನೋವಿನಿಂದ ಆದ ತತ್ತರಿಸಿಹೋಗಿದ್ದನಂತೆ. ತಾನು ಎಷ್ಟು ಸಮಾಧಾನಪಡಿಸಿದರೂ ಆ ನೋವನ್ನು ಮರೆಮಾಚಲು ಅಥವಾ ಕಡಿಮೆ ಮಾಡಲು ಆಗಲಿಲ್ಲ. ಆದ್ದರಿಂದ ನಾನು ತುಂಬಾ ಯೋಚಿಸಿ ನಂತರ ಒಂದು ನಿರ್ಧಾರಕ್ಕೆ ಬಂದೆ ಎಂದಿರುವ ಆಮ್ರಿ, ತೆಗೆದುಕೊಂಡಿರುವ ನಿರ್ಧಾರ ಏನು ಗೊತ್ತೆ? ಪ್ರಿಯತಮನ ಅಮ್ಮನಾಗುವ ನಿರ್ಧಾರ. ಅರ್ಥಾತ್ ಆತನ ಅಪ್ಪನನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾಳೆ!
ಕೇವಲ ನಿರ್ಧಾರ ತೆಗೆದುಕೊಂಡರೆ ಇಷ್ಟು ಸುದ್ದಿಯೇ ಆಗುತ್ತಿರಲಿಲ್ಲ. ಬದಲಿಗೆ ಈಕೆ, ಮದುವೆ ಕೂಡ ಆಗಿದ್ದಾಳೆ. ಸದ್ಯ ಈಗ ಪ್ರಿಯತಮನ ಅಮ್ಮನಾಗಿದ್ದಾಳೆ. ಇದು ನನ್ನದು ತ್ಯಾಗ ಹಾಗೂ ನಿಸ್ವಾರ್ಥ ಪ್ರೀತಿ ಎಂದು ಹೇಳಿಕೊಂಡಿದ್ದಾಳೆ. ಹೀಗೆ ಮಾಡಿರುವುದಿಂದ ನನ್ನ ಪ್ರಿಯತಮನಿಗೆ ಅಮ್ಮನನ್ನು ನೋಡಲು ಸಿಕ್ಕಂತಾಗಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಹಲವರು ಥೂ ಎಂದು ಹೇಳಿದ್ದಾರೆ. ವಿದೇಶದಲ್ಲಿ ಇವೆಲ್ಲಾ ಕಾಮನ್, ಅಮ್ಮನೂ ಆಗುವ ಅವಳು ಕೊನೆಗೆ ಪ್ರಿಯತಮನ ಜತೆಯೂ ಇದ್ದರೆ ಅಚ್ಚರಿಯಿಲ್ಲ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ!