ಕಾಸರಗೋಡು: ಸಮಾಜದಲ್ಲಿ ಪಿಡುಗಾಗಿ ಕಾಡುತ್ತಿರುವ ವರದಕ್ಷಿಣೆ ಹಾಗೂ ವರದಕ್ಷಿಣೆ ಸಂಬಂಧಿ ಕಿರುಕುಳದ ವಿರುದ್ಧ ಹೋರಾಡಲು ಮಹಿಳಾ ಸಂಘಟನೆಗಳು ಹಾಗೂ ಕುಟುಂಬಶ್ರೀಗಳು ಮುಂದಾಗುವಂತೆ ಸ್ಥಳೀಯಾಡಳಿತ ಮತ್ತು ಅಬಕಾರಿ ಖಾತೆ ಸಚಿವ ಡಂ.ವಿ ಗೋವಿಂದನ್ ತಿಳಿಸಿದ್ದಾರೆ.
ಅವರು ಮೇಲ್ಪರಂಬದಲ್ಲಿ ಮಹಿಳಾ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಉದುಮ ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್ ಭದ್ರತಾ ಕೊಠಡಿ, ಚೆಮ್ನಾಡ್ ಗ್ರಾಪಂ ಅಧ್ಯಕ್ಷೆ ಸುಫೈಜಾ ಟೀಚರ್ ಕ್ಯಾಶ್ ಕೌಂಟರ್ ಉದ್ಘಾಟಿಸಿದರು. ಮಾಜಿ ಶಾಸಕ ಕೆ.ವಿ ಕುಞÂರಾಮನ್ ಕಂಪ್ಯೂಟರ್ ಸ್ವಿಚ್ ಆನ್ ನಡೆಸಿದರು. ಸಹಕಾರಿ ಇಲಾಖೆ ಸಹಾಯಕ ನಿಬಂಧಕ ಆನಂದನ್Éಂ. ಠೇವಣಿ ಸವೀಕರಿಸಿದರು. ಸಹಾಯಕ ನಿಬಂಧಕರಾದ ವಿ. ಚಂದ್ರನ್ ಶೇರ್ ಸರ್ಟಿಫಿಕೇಟ್ ಹಾಗೂ ರವೀಂದ್ರನ್ ಸಾಲ ವಿತರಿಸಿದರು. ಜಯಚಂದ್ರನ್ ಎ. ಲೋಗೋ ಅನಾವರಣಗೊಳಿಸಿದರು. ಗ್ರಾಪಂ ಉಪಾಧ್ಯಕ್ಷ ಮನ್ಸೂರ್ ಕುರಿಕ್ಕಲ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಹಬೀಬ್ ರಹಮಾನ್, ಗ್ರಾಮ ಪಂಚಾಯಿತಿ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.