ಮುಳ್ಳೇರಿಯ: ಗುರುಕುಲ ಪ್ರತಿಷ್ಠಾನದಿಂದ ಅಪ್ರಕಟಿತ ಕೃತಿಗಳಿಗೆ ಕೊಡಲ್ಪಡುವ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಯು ಕಾಸರಗೋಡಿನ ಕು.ಲತಾ ಆಚಾರ್ಯ ಬನಾರಿ ಅವರ ಕಾವ್ಯಲತೆ ಕವನ ಸಂಕಲನಕ್ಕೆ ಲಭಿಸಿದೆ.
ಅ. 17 ರಂದು ತುಮಕೂರಿನ ಶ್ರೀ ಉದ್ಧಾನೇಶ್ವರ ಸಮುದಾಯ ಭವನದಲ್ಲಿ ನಡೆದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಲತಾ ಆಚಾರ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸರ್ವೋತ್ತಮ ಆಚಾರ್ಯ, ಟಿ ಎಸ್ ನಾಗಾಭರಣ ಮೊದಲಾದವರು ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಕುಲ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರೂ ಶಿಕ್ಷಕರೂ ಆಗಿರುವ ಹುಲಿಯೂರು ದುರ್ಗ ಲಕ್ಷ್ಮೀನಾರಾಯಣ ಅವರು ಕವಯಿತ್ರಿಯ ಮುಂದಿನ ಸಾಹಿತ್ಯ ಪಯಣಕ್ಕೆ ಶುಭ ಹಾರೈಸಿದರು.