ಬದಿಯಡ್ಕ: ಗಾಂಧಿ ಜಯಂತಿಯ ಪ್ರಯುಕ್ತ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಗಾಂಧಿ ಪಾದಯಾತ್ರೆ ಶನಿವಾರ ನಡೆಯಿತು.
ನೀರ್ಚಾಲು ಪೇಟೆಯಿಂದ ಆರಂಭವಾದ ಪಾದಯಾತ್ರೆ ಬದಿಯಡ್ಕ ಪೇಟೆಯಲ್ಲಿ ಮುಕ್ತಾಯವಾಯಿತು. ನಿರ್ಚಾಲು ಪೇಟೆಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ಕಾರ್ಯಕ್ರಮವನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಅವರು ಕಾಂಗ್ರೆಸ್ ಪಕ್ಷದ ಪತಾಕೆಯನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಮಣಿಯಾಣಿ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿ ಮಾತನಾಡಿ, ಗಾಂ|ಧಿüೀಜಿಯ ಚಿಂತನೆಗಳು, ಆದರ್ಶಗಳು,ಅಹಿಂಸೆ, ಸತ್ಯಾಗ್ರಹ , ತತ್ವಾದರ್ಶಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಮಾತ್ರ ಸಂರಕ್ಷಿಸಲು ಸಾಧ್ಯ ಎಂದು ತಿಳಿಸಿದರು.
ಎಂ. ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನೇತಾರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ, ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್, ಪಿ.ಜಿ. ಜಗನ್ನಾಥ ರೈ, ಶ್ಯಾಮ ಪ್ರಸಾದ್ ಮಾನ್ಯ, ಖಾದರ್ ಮಾನ್ಯ ಮಾತನಾಡಿದರು, ಜನಪ್ರತಿನಿಧಿಗಳಾದ ಜಯಶ್ರೀ, ಅನಸೂಯಾ, ಕುಮಾರ ನಾಯರ್, ಮ್ಯಾಥ್ಯೂಸ್, ಶಾಫಿ ಪಯ್ಯಲಡ್ಕ, ಶಾಫಿ ಗೋಳಿಯಡ್ಕ, ಜಯಪ್ರಕಾಶ್, ವಸಂತ ಕನ್ಯಪ್ಪಾಡಿ, ಐತಪ್ಪ ಪಟ್ಟಾಜೆ, ರಾಮ ಪಟ್ಟಾಜೆ, ಸಿರಿಲ್ ಡಿಸೋಜಾ, ನವೀನ ರೈ ಪೆರಡಾಲ, ಉದಯ, ರವಿ, ಶ್ರೀನಾಥ್ ಮೊದಲಾದವರು ಪಾದಯಾತ್ರೆ ನೇತೃತ್ವವಹಿಸಿದ್ದರು.