ಕಾಸರಗೋಡು: ಸರಕಾರಿ ಇಲಾಖೆಗಳ ಸೇವೆಗಳ ಕುರಿತು ಮಾಹಿತಿ ಪಡೆಯಲು, ದೂರವಾಣಿ ಮೂಲಕ ಸಂಪರ್ಕಿಸಲು, ಇನ್ನು ಮುಂದೆ ಬಸವಳಿಯಬೇಕಿಲ್ಲ. ಶಿಸ್ತು ಮತ್ತು ಸೇವೆಗಳಲ್ಲಿ ಅತ್ಯುತ್ತಮ ರೀತಿ ವರ್ತಿಸುವ ಸಿಬ್ಬಂದಿಯನ್ನು ಹತ್ತು ಮಂದಿ ಅರಿತುಕೊಳ್ಳುವ ನಿಟ್ಟಿನಲ್ಲಿ ಗೊಂದಲ ಬೇಕಿಲ್ಲ. ಈ ಎಲ್ಲ ಸಾಧ್ಯತೆಗಳು "ಎಂಡೆ ಜಿಲ್ಲ"(ನನ್ನ ಜಿಲ್ಲೆ) ಎಂಬ ಮೊಬೈಲ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಕಚೇರಿಗಳ ಲೊಕೇಷನ್ ಪತ್ತೆಗೆ, ದೂರವಾಣಿ ಸಂಖ್ಯೆ, ಈ-ಮೇಲ್ ವಿಳಾಸಗಳಿಗೆ ಸಂಪರ್ಕಿಸಲು, ಚಟುವಟಿಕೆಗಳ ಅವಲೋಕನ, ದೂರು ಸಲ್ಲಿಕೆ ಇತ್ಯಾದಿ ಸೌಲಭ್ಯಗಳಿಗಾಗಿ ಇನ್ ಫಾರ್ಮೆಟಿಕ್ ಸ್ ಸೆಂಟರ್ ರಚಿಸಿರುವ ಈ ಆಪ್ ಸಜ್ಜಾಗಿದೆ. ಗೂಗಲ್ ಸ್ಟೋರ್ ನಿಂದ ಡೌನ್ ಲೋಡ್ ನಡೆಸಿ, ಅಪ್ಲಿಕೆಷನ್ ಗೆ ಪ್ರವೇಶಾತಿ ಪಡೆದು ಜಿಲ್ಲೆಯ ಆಯ್ಕೆ ಸಾಧ್ಯವಾಗಲಿದೆ.
ನಂತರ ತೆರೆದುಕೊಳ್ಳುವ ಪುಟಗಳಲ್ಲಿ ಇಲಾಖೆ ಯಾ ಸಂಸ್ಥೆ ಆಯ್ಕೆ ನಡೆಸುವ ವೇಳೆ ಇಲಾಖೆ ವ್ಯಾಪ್ತಿಯ ಸಂಸ್ಥೆಗಳ ಪಟ್ಟಿ ಪ್ರಕಟಗೊಳ್ಳಲಿದೆ. ಇಲ್ಲಿ ಅಗತ್ಯವಿರುವ ಹೆಸರಿಗೆ ಕ್ಲಿಕ್ ನಡೆಸಬೇಕು. ಉದಾಹರಣೆಗೆ ಕಾಸರಗೋಡು ಜಿಲ್ಲೆಯ ಪ್ರಧಾನ ಪುಟದಲ್ಲಿ ಮೊದಲಿಗೆ ಕಂದಾಯ ಇಲಾಖೆಯನ್ನು ಆಯ್ಕೆ ಮಡಿದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಗ್ರಾಮ ಕಚೇರಿಗಳ ವರೆಗಿನ ಎಲ್ಲ ಕಂದಾಯ ಕಾರ್ಯಾಲಯಗಳ ಪಟ್ಟಿ ಕಾಣಬಹುದಾಗಿದೆ.
ಕಚೇರಿಯೊಂದನ್ನು ಆಯ್ಕೆ ಮಾಡಿದರೆ ಅಲ್ಲಿ ಲಭ್ಯವಿರುವ ಸೇವೆಗಳ ಪಟ್ಟಿ ಮತ್ತು ವಿವಿಧ ವಿಭಾಗಗಳು ಪ್ರಕಟಗೊಳ್ಳಲಿವೆ. "ಮೇಕ್ ಎ ಕಾಲ್" ಎಂಬ ಆಪ್ಶನ್ ಆಯ್ಕೆ ಮಾಡಿದಲ್ಲಿ ಆ ಕಚೇರಿಯ ದೂರವಾಣಿ ಸಂಖ್ಯೆ ಕಂಡುಬರುತ್ತದೆ. ಅಪ್ಲಿಕೇಷನ್ ಮೂಲಕವೇ ಆ ನಂಬ್ರಕ್ಕೆ ಕರೆಮಾಡಬಹುದಾಗಿದೆ. "ಲೊಕೇಟ್ ಆನ್ ಮ್ಯಾಪ್" ಎಂಬ ಆಪ್ಶನ್ ಆಯ್ಕೆ ಮಾಡಿಕೊಂಡಲ್ಲಿ ಕಚೇರಿ ಎಲ್ಲಿದೆ ಎಂಬುದನ್ನು ಗೂಗಲ್ ಮ್ಯಾಪ್ ಮೂಲಕ ಪತ್ತೆ ಹಚ್ಚಬಹುದಾಗಿದೆ. "ರೈಟ್ ಎ ರಿವ್ಯೂ' ಎಂಬ ಆಪ್ಶನ್ ಗೆ ದೂರವಾಣಿ ಸಂಖ್ಯೆ ನಮೂದಿಸಿ ನೋಂದಣಿ ನಡೆಸಿ ಕಚೇರಿಯ ಚಟುವಟಿಕೆಯ ಅವಲೋಕನ ನಡೆಸಬಹುದಾಗಿದೆ. ಇಲ್ಲಿ ಕಚೇರಿಗೆ ಸಂಬಂಧಿಸಿದ ಅನುಭವ ಬರೆದು, ದಾಖಲಿಸಿ ಸ್ಟಾರ್ ರೇಟಿಂಗ್ ನೀಡಬಹುದಾಗಿದೆ.
ಇ-ಮೇಲ್ ಸಲ್ಲಿಕೆಗೆ, ಹೆಚ್ಚುವರಿ ಮಾಹಿತಿ ಪಡೆಯಲು ಆಪ್ಶನ್ ಗಳು ಈ ಆಪ್ ನಲ್ಲಿವೆ. ಅಪ್ಲಿಕೇಷನ್ ನಲ್ಲಿ ಸಾರ್ವಜನಿಕರು ನೀಡುವ ರೇಟಿಂಗ್ ದಾಖಲಿಸುವ ಅಭಿಪ್ರಾಯಗಳು ಎಲ್ಲರೂ ನೋಡುವ ರೀತಿಯಲ್ಲೇ ಇರುವುದು. ಜಿಲ್ಲೆಯ ಪ್ರಧಾನ ಪುಟದಲ್ಲೂ ಇಲಾಖೆಗಳ ಪುಟದಲ್ಲೂ ಕಚೇರಿಗಳನ್ನು ಸರ್ಚ್ ನಡೆಸುವ ಸೌಲಭ್ಯಗಳಿವೆ.
ಅಪ್ಲಿಕೇಷನ್ ಮೂಲಕ ಸಾರ್ವಜನಿಕರು ನೀಡುವ ಅಭಿಮತ, ತುರ್ತು ಕ್ರಮಗಳು ಅಗತ್ಯವಿರುವ ವಿಷಯಗಳನ್ನು ತಕ್ಷಣ ಆಯಾ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುವ ನಿಟ್ಟಿನಲ್ಲಿ ಪ್ರತ್ಯೇಕ ಸಜ್ಜೀಕರಣ ಏರ್ಪಡಿಸಲಾಗಿದೆ ಎಂದೂ, ಸರಕಾರಿ ಸೇವೆಗಳನ್ನು ಸುಧಾರಿತಗೊಳಿಸುವ ನಿಟ್ಟಿನಲ್ಲಿ ಈ ಅಪ್ಲಿಕೆಷನ್ ಪೂರಕವಾಗಿದೆ ಎಂದೂ ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ತಿಳಿಸಿದ್ದಾರೆ.
ಕಂದಾಯ, ಪೆÇಲೀಸ್, ರಸ್ತೆ ಸಂಚಾರಿ, ಸ್ಥಳೀಯಾಡಳಿತ, ಕೆ.ಎಸ್.ಇ.ಬಿ., ಕೃಷಿ, ಸಾರ್ವಜನಿಕ ಪೂರೈಕೆ, ನೋಂದಣಿ, ಪಶುಸಂಗೋಪನೆ, ಮೀನುಗಾರಿಕೆ, ಶಿಕ್ಷಣ, ಉದ್ದಿಮೆ, ಅಕ್ಷಯ, ಕಾಲೇಜುಗಳು, ಆಸ್ಪತ್ರೆಗಳು, ಲೋಕೋಪಯೋಗಿ, ಇಕನಾಮಿಕ್ಸ್ ಆಂಡ್ ಸ್ಟಾಟಿಸ್ಟಿಕ್ಸ್, ಖಜಾನೆ, ನೀರಾವರಿ, ಸಮಾಜನೀತಿ, ಅಗ್ನಿಶಾಮಕ, ಪ್ರವಾಸೋದ್ಯಮ, ಕೆ.ಎಸ್.ಎಫ್.ಇ., ನ್ಯಾಯಾಲಯಗಳು, ಹಾಲು ಉತ್ಪಾದನೆ, ಉದ್ಯೋಗ, ಅರಣ್ಯ, ಅಬಕಾರಿ, ಜಿ.ಎಸ್.ಟಿ., ಬಂದರು, ಜನ ಔಷಧಿ ಸ್ಟೋರ್ ಗಳು ಇತ್ಯಾದಿಗಳು ಜಿಲ್ಲೆಯ ಪ್ರಧಾನ ಪುಟದಲ್ಲಿ ಇವೆ. ಇತರ ಪ್ರಧಾನ ಜಿಲ್ಲಾ ಕಚೇರಿಗಳು, ಕೇಂದ್ರ ಸರಕಾರಿ ಕಚೇರಿಗಳ ಪತ್ತೆಗೆ ಪ್ರತ್ಯೇಕ ಆಪ್ಶನ್ ಗಳಿವೆ.