ತಿರುವನಂತಪುರಂ: ರಾಜ್ಯದ ಕಳಪೆ ಆರ್ಥಿಕ ಸ್ಥಿತಿಯಿಂದಾಗಿ ಹೆಚ್ಚುವರಿ ಬ್ಯಾಚ್ ನ್ನು ಹಾಲಿ ಪ್ಲಸ್ ಒನ್ ಪ್ರವೇಶಕ್ಕೆ ಅನುಮತಿಸಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದ್ದಾರೆ. ಎರಡನೇ ಹಂತದ ಸೀಟ್ ಹಂಚಿಕೆಯ ನಂತರ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಇಂದು ಪ್ರತಿಪಕ್ಷಗಳ ತುರ್ತು ಮಂಡನೆಯ ಸೂಚನೆಗೆ ಪ್ರತಿಕ್ರಿಯೆಯಾಗಿ ಶಿವಂಕುಟ್ಟಿ ವಿಧಾನಸಭೆಗೆ ತಿಳಿಸಿದರು.
ತುರ್ತು ನಿರ್ಣಯಕ್ಕಾಗಿ ಸೂಚನೆ ನೀಡಿದ ಶಾಸಕ ಶಾಫಿ ಪರಂಪಿಲ್, ಪ್ಲಸ್ ಒನ್ ಪ್ರವೇಶಕ್ಕೆ ಹೆಚ್ಚುವರಿ ಬ್ಯಾಚ್‌ಗಳು ಅತ್ಯಗತ್ಯ ಮತ್ತು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ನಂತರ ಅಗತ್ಯವಿದ್ದಲ್ಲಿ ಸೀಟುಗಳನ್ನು ಒದಗಿಸಬೇಕು ಎಂದು ಹೇಳಿದರು. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯು ಪ್ಲಸ್ ಒನ್ ಹೆಚ್ಚುವರಿ ಬ್ಯಾಚ್ ನ್ನು ಅನುಮತಿಸುವ ಸ್ಥಿತಿಯಲ್ಲಿಲ್ಲ.ಆದ್ದರಿಂದ ಹೆಚ್ಚುವರಿ ಸೀಟ್ ಅನುಮತಿಸುವುದಿಲ್ಲ ಎಂದು ಶಿವನ್ ಕುಟ್ಟಿ ಉತ್ತರಿಸಿದರು. ಏಳು ಜಿಲ್ಲೆಗಳಲ್ಲಿ ಪ್ಲಸ್ ಒನ್ ಗೆ ಶೇ 20 ರಷ್ಟು ಸೀಟುಗಳನ್ನು ನೀಡಲಾಗಿದೆ. ಇದು 4.25 ಲಕ್ಷ ಮಂದಿಗೆ ಪ್ರವೇಶವನ್ನು ಒದಗಿಸುತ್ತದೆ.
ಮೊದಲ ಸೀಟು ಹಂಚಿಕೆಯ ನಂತರ 71,230 ಮೆರಿಟ್ ಸೀಟುಗಳು ಖಾಲಿ ಇವೆ. ಕಳೆದ ವರ್ಷ 16,650 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಆದರೆ ಸೇರಿರಲಿಲ್ಲ. ಐದು ವರ್ಷಗಳಲ್ಲಿ, ಶೇ .90.5 ರಷ್ಟು ಮಾತ್ರ ಮುಂದಿನ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಒಟ್ಟು 3,85,530 ಸೀಟುಗಳಿವೆ. ಮೊದಲ ಹಂಚಿಕೆಯ ಮೂಲಕ 2,01,450 ಸೀಟುಗಳನ್ನು ಪ್ಲಸ್ ಒನ್ ಗೆ ಹಂಚಲಾಯಿತು. ಎರಡನೇ ಹಂಚಿಕೆಗೆ 1,92,859 ಸೀಟುಗಳು ಉಳಿದಿವೆ. ಆದರೆ 1,59,840 ಅರ್ಜಿದಾರರು ಮಾತ್ರ ಇದ್ದರು. 33,119 ಸೀಟುಗಳು ಉಳಿದಿವೆ ಎಂದು ಸಚಿವರು ಹೇಳಿದರು.