HEALTH TIPS

ಎಡನೀರು ಶ್ರೀಗಳ ಪೀಠಾರೋಹಣ ಪ್ರಥಮ ವಾರ್ಷಿಕೋತ್ಸವ ಸಂಪನ್ನ

                  ಬದಿಯಡ್ಕ: ಶ್ರೀಮದ್ ಎಡನೀರು ಮಠದ ಧಾರ್ಮಿಕ, ಸಾಂಸ್ಕøತಿಕ ಕೊಡುಗೆಗಳಿಂದ ಕರಾವಳಿ ನಾಡಾದ ಕಾಸರಗೋಡಿನ ಹಿರಿಮೆ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಮಠದ ನೂತನ ಯತಿಗಳಾಗಿ ಒಂದು ವರ್ಷಗಳನ್ನು ಪೂರೈಸಿರುವ ಸಚ್ಚಿದಾನಂದ ಭಾರತೀ ಶ್ರೀಗಳು ಪೂರ್ವ ಪರಂಪರೆಯನ್ನು ಮುನ್ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಪ್ರಶಮಸೆಗೆ ಒಳಗಾಗಿರುವುದು ನಮ್ಮ ಸುದೈವ ಎಂದು ಕಾಸರಗೋಡು ಸ|ಂಸದ ರಾಜಮೋಹನ ಉಣ್ಣಿತ್ತಾನ್ ಅವರು ತಿಳಿಸಿದರು.


                 ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪೀಠಾರೋಹಣದ ಪ್ರಥಮ ವಾರ್ಷಿಕ ದಿನದ ಅಂಗವಾಗಿ ಭಾನುವಾರ ಸಂಜೆ ಶ್ರೀಮಠದಲ್ಲಿ ನಡೆದ ಧಾರ್ಮಿಕ-ಸಾಂಸ್ಕøತಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

                ಶ್ರೀಗಳು ಪೀಠಾರೋಹಣಗೈದ ಪುಣ್ಯ ಕರ್ಮದಲ್ಲಿ ಕುಟುಂಬ ಸಹಿತನಾಗಿ ಭಾಗವಹಿಸಿದ್ದು ಅತ್ಯಪೂರ್ವ ಕ್ಷಣವಾಗಿ ಈಗಲೂ ನೆನಪಿಸುವೆ ಎಂದ ಸಂಸದರು, ಸನಾತನ ಧರ್ಮವನ್ನು ಸಮರ್ಥರಾಗಿ ಮುನ್ನಡೆಸಲು ಶ್ರೀಸಚ್ಚಿದಾನಂದ ಭಾರತೀ ಶ್ರೀಗಳಿಗಿರುವ ಶಕ್ತಿ ಸಂಪನ್ನತೆ ಎಲ್ಲರ ಸಂಕಷ್ಟಗಳನ್ನು ಪಾರುಮಾಡಲಿ ಎಂದು ತಿಳಿಸಿದರು.

               ಕರ್ನಾಟಕ ಸರ್ಕಾರದ ಲೋಕಸೇವಾ ಆಯೋಗದ ನಿವೃತ್ತ  ಅಧ್ಯಕ್ಷ, ಶ್ರೀಗಳ ಪ್ರಥಮ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.

                ಕುಂಟಾರು ರವೀಶ ತಂತ್ರಿ ಸ್ವಾಗತಿಸಿ,  ಕೆಯ್ಯೂರು ನಾರಾಯಣ ಭಟ್ ಭಟ್ ವಂದಿಸಿದರು. ವಿದ್ವಾನ್. ವಿ.ಬಿ.ಹಿರಣ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀಹನುಮಹಿರಿ ಮೇಳದವರಿಂದ ಶುಕ್ರನಂದನೆ ಯಕ್ಷಗಾನ ಪ್ರದರ್ಶನ ನಡೆಯಿತು. ಈ ವೇಳೆ ಕಾಂಚಿ ಕಾಮಕೋಟಿ ಪೀಠದ ಶ್ರೀಜಯೇಂದ್ರ ಸರಸ್ವತೀ ಶ್ರೀಗಳು ಅಂತರ್ಜಾಲದ ಮೂಲಕ ಮಾತನಾಡಿ, ಸಮಾಜದ ಧಾರ್ಮಿಕ ವಿಕಾಸದಲ್ಲಿ ಶ್ರೀಮಠ ಉತ್ತಮವಾಗಿ ಮುನ್ನಡೆಯುತ್ತಿದೆ.   ಧರ್ಮ ಪ್ರಸಾರದಲ್ಲಿ ಇನ್ನಷ್ಟು ಸಾಧನೆಗಳು ಕರಾವಳಿ ಪ್ರದೇಶದಲ್ಲಿ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳಿಂದ ನಡೆಯಲಿ ಎಂದು ಆಶೀರ್ವದಿಸಿದರು. ಪ್ರಥಮ ವಾರ್ಷಿಕ ದಿನದ ಅಂಗವಾಗಿ ವಿವಿಧ ವೈದಿಕ-ಧಾರ್ಮಿಕ ವಿಧಿವಿಧಾನಗಳು ನಡೆಯಿತು.  


           

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries