ಕಾಸರಗೋಡು : ತಲೆಹೊರೆ ಕಾರ್ಮಿಕರ ಉದ್ಯೋಗ ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕಾನೂನು ರಚಿಸಬೇಕು, ತಲೆಹೊರೆಕಾರ್ಮಿಕರನ್ನು ಇಎಸ್‍ಐ ವ್ಯಾಪ್ತಿಗೆ ತರಬೇಕು ಮುಂತಾದ ಬೇಡಿಕೆ ಮುಂದಿರಿಸಿ ತಲೆಹೊರೆ ಹೊರೆ ಕಾರ್ಮಿಕರ ಮತ್ತು ಜನರಲ್ ಮಜ್ದೂರ್ ಸಂಘ(ಬಿಎಂಎಸ್)ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು. ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಪಿ ರಾಜೀವನ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ವಿನೋದ್ ಸಿ.ಎಚ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪಿ.ದಿನೇಶ್, ಹರೀಶ್ ಕುದ್ರೆಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.