ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿನ ಹನ್ನೆರಡನೇ ವಾರ್ಡಿನ ಮದಕ- ಮಾವಿನಹಿತ್ಲು ರಸ್ತೆಯನ್ನು ಮಹಾತ್ಮ ಗಾಂಧಿ ದೇಶೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕಾಂಕ್ರೀಟಿಕರಣ ಗೊಳಿಸಿದ್ದು, ಸೋಮವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ, ಆರೋಗ್ಯ-ವಿಧ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಜಯಕುಮಾರ್ ಕೆ. ವಾರ್ಡು ಸದಸ್ಯರು ಮತ್ತು ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸುಜಾತಾ ಎಂ ರೈ ಮತ್ತು ಹನ್ನೊಂದನೇ ವಾರ್ಡಿನ ಸದಸ್ಯೆ ಭಾಗೀರಥಿ ರೈ , ಉದ್ಯೋಗ ಖಾತರಿ ಯೋಜನೆಯ ಸಹಾಯಕ ಅಭಿಯಂತರೆ ಶಿಲ್ಪಾ ಜೆ ಹಾಗೂ ಊರಿನ ಹಿರಿಯರಾದ ಪನೆಯಾಲ ಗೋವಿಂದ ಭಟ್ ಉಪಸ್ಥಿತರಿದ್ದರು.