ಕಾಸರಗೋಡು: ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿರುವ ಯಾ ಅನುತೀರ್ಣರಾಗಿರುವ ಮಕ್ಕಳಿಗೆ ಎಸ್.ಎಸ್.ಎಲ್.ಸಿ., ಪ್ಲಸ್-ಟು ಪರೀಕ್ಷೆಗಳಿಗೆ ಉಚಿತ ರೂಪದಲ್ಲಿ ಮುಂದಿನ ಶಿಕ್ಷಣ ಪಡೆಯುವ ಅವಕಾಶಗಳಿರುವ ಕೇರಳ ಪೆÇಲೀಸ್ ಇಲಾಖೆ ವತಿಯ ಹೋಪ್ ಯೋಜನೆಯಲ್ಲಿ ಆಸಕ್ತರು ತಮ್ಮ ಹೆಸರು ನೋಂದಣಿ ನಡೆಸಬಹುದು. ನೋಂದಣಿ ಪಡೆದವರಿಗೆ ತಮ್ಮ ಜಿಲ್ಲೆಯಲ್ಲೇ ಪರಿಣತರಿಂದ ತರಬೇತಿ ಲಭಿಸಲಿದೆ. ಆಸಕ್ತರು ತಮ್ಮ ಸಮೀಪದ ಪೆÇಲೀಸ್ ಠಾಣೆಯನ್ನು ಯಾ 9497900200 ಎಂಬ ಚಿರಿ ಯೋಜನೆಯ ಸಹಾಯವಾಣಿ ಮುಖಾಂತರ ಅ.16ರ ಮುಂಚಿತವಾಗಿ ನೋಂದಣಿ ನಡೆಸಬಹುದು.