ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ತನ್ನ ಮೂಲ ಕಂಪನಿಯ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ.
ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್(Mark Zuckerberg)ಅವರು ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ್ದಾರೆ. ಈ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ. ಫೇಸ್‌ಬುಕ್ ಅಡಿಯಲ್ಲಿ ಇರುವ ಜಾಲತಾಣಗಳು, ಕಾರ್ಪೋರೇಟ್ ವ್ಯವಹಾರಗಳೆಲ್ಲವೂ ಈಗ 'ಮೆಟಾ'ದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿವೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ಗಳನ್ನು ಪ್ರಪಂಚದಾದ್ಯಂತ ಶತಕೋಟಿ ಜನರು ಬಳಸುತ್ತಾರೆ. ಕಂಪನಿಯು ತನ್ನ ಮಾರುಕಟ್ಟೆ, ಅದರ ನಿರ್ಧಾರಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿನ ದುರುಪಯೋಗಗಳ ಮೇಲೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವಾಗ ಈ ಹೆಸರು ಬದಲಾವಣೆಯಾಗಿದೆ.
ನಮ್ಮ ಕಂಪನಿಯು ಈಗ ಮೆಟಾ ಆಗಿದೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ನಮ್ಮ ಧ್ಯೇಯ ಒಂದೇ ಆಗಿದೆ. ಅದು ಎಲ್ಲಾರನ್ನು ಒಟ್ಟಿಗೆ ತರುವುದು. ಆದ್ರೆ ನಮ್ಮ ಅಪ್ಲಿಕೇಶನ್‌ಗಳು ಹಾಗೂ ಬ್ರ್ಯಾಂಡ್‌ಗಳು ಬದಲಾಗುವುದಿಲ್ಲ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದರು.