ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 12 ಹಂತದ ಗ್ರೂಪ್ 2ರ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಗೆಲ್ಲಲು 152 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದು ಇದರ ಬೆನ್ನಲ್ಲೇ ಕೆಎಲ್ ರಾಹುಲ್ 3 ರನ್ ಗಳಿಗೆ ಔಟಾಗಿ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಈ ವೇಳೆ ನಾಯಕ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದು 57 ರನ್ ಬಾರಿಸಿದರು. ಇನ್ನು ರಿಷಬ್ ಪಂತ್ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 39 ರನ್ ಬಾರಿಸಿದ್ದು ಇದರ ನೆರವಿನೊಂದಿಗೆ ಟೀಂ ಇಂಡಿಯಾ 151 ರನ್ ಪೇರಿಸಲು ಸಾಧ್ಯವಾಯಿತು.
ಪಾಕಿಸ್ತಾನ ಪರ ಬೌಲಿಂಗ್ ನಲ್ಲಿ ಶಹೀನ್ ಶಾ ಅಫ್ರಿದಿ 3, ಹಸನ್ ಅಲಿ 2, ಶಾಬಾದ್ ಖಾನ್ ಮತ್ತು ಹ್ಯಾರಿಸ್ ರೂಫ್ ತಲಾ 1 ವಿಕೆಟ್ ಪಡೆದಿದ್ದಾರೆ.