ನವದೆಹಲಿ: ಔಷಧ ತಯಾರಕ ಸಂಸ್ಥೆ ಝೈಡಸ್ ಕ್ಯಾಡಿಲಾ ತಾನು ಸರ್ಕಾರಕ್ಕೆ ಒಂದು ಕೋಟಿ ಡೋಸ್ ಗಳನ್ನು ಪ್ರತಿ ಡೋಸ್ ಗೆ 265 ರೂಪಾಯಿಯ ಬೆಲೆಗೆ ಪೂರೈಕೆ ಮಾಡುತ್ತಿರುವುದಾಗಿ ಹೇಳಿದೆ.
"ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದ್ದುಮ್ ಸರ್ಕಾರಕ್ಕೆ ಪ್ರತಿ ಡೋಸ್ ಗೆ 265 ರೂಪಾಯಿ ಬೆಲೆಯಲ್ಲಿ ಪೂರೈಕೆ ಮಾಡಲಾಗುತ್ತಿದೆ, ಒಂದು ಕೋಟಿ ಡೋಸ್ ಗಳನ್ನು ಪೂರೈಕೆ ಮಾಡುವುದಕ್ಕೆ ಸರ್ಕಾರದಿಂದ ಆರ್ಡರ್ ಬಂದಿದೆ ಎಂದು ಸೂಜಿ-ಮುಕ್ತ ಲೇಪಕವನ್ನು ಜಿಎಸ್ ಟಿ ರಹಿತವಾಗಿ ಪ್ರತಿ ಡೋಸ್ ಗೆ 93 ರೂಪಾಯಿಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ. ಸಾಂಪ್ರದಾಯಿಕ ಸಿರೆಂಜ್ ಗಳ ಬದಲಾಗಿ ಸೂಜಿ ರಹಿತ ಅಪ್ಲಿಕೇಟರ್ ಗಳನ್ನು ಬಳಕೆ ಮಾಡಿ ಈ ಲಸಿಕೆಯನ್ನು ನೀಡಲಾಗುತ್ತದೆ. 28 ದಿನಗಳ ಮಧ್ಯಂತರದಲ್ಲಿ ಮೂರು ಡೋಸ್ಗಳನ್ನು ನೀಡಲಾಗುತ್ತದೆ.
ಈ ಅಪ್ಲಿಕೇಟರ್ ನ್ನು ಫಾರ್ಮಾ ಜೆಟ್ ಎಂದು ಹೇಳಲಾಗಿದ್ದು, ಇದರಿಂದ ಅಡ್ಡಪರಿಣಾಮಗಳೂ ಕಡಿಮೆ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಝೈಕೋವ್-ಡಿಯ ಮೂಲಕ ಸರ್ಕಾರದ ಲಸಿಕೆ ಯೋಜನೆಗೆ ಸಹಕರಿಸುವುದಕ್ಕಾಗಿ ನಾವು ಸಿದ್ಧರಿದ್ದೇವೆ. ಸೂಜಿ ಮುಕ್ತ ಲಸಿಕೆ ಹೆಚ್ಚು ಮಂದಿಗೆ ಲಸಿಕೆ ಪಡೆಯುವುದಕ್ಕೆ ಉತ್ತೇಜನ ನೀಡಲಿದೆ. 12 ರಿಂದ 18 ವರ್ಷಗಳವರೆಗಿನ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ ಎಂದು ಝೈಡಸ್ ಕ್ಯಾಡಿಲಾದ ಎಂಡಿ ಶರ್ವಿಲ್ ಪಟೇಲ್ ಹೇಳಿದ್ದಾರೆ.