ಸೋಮವಾರ ಸಂಜೆ 7ಗಂಟೆಗೆ ಕೊನೆಗೊಂಡಂತೆ ದೇಶದಲ್ಲಿ 54 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ.
ದೇಶದಾದ್ಯಂತ ಜನವರಿ 16 ರಿಂದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸುವ ಮೂಲಕ ಅಭಿಯಾನ ಆರಂಭಿಸಲಾಯಿತು. ಫೆಬ್ರುವರಿ 2ರ ಬಳಿಕ ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗಿತ್ತು.
ಮಾರ್ಚ್ 1ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಏಪ್ರಿಲ್ 1ರ ಬಳಿಕ 45 ವರ್ಷ ಮೇಲಿನವರಿಗೆ ಲಸಿಕೆ ವಿತರಿಸಲಾಯಿತು.
ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅವಕಾಶ ಕಲ್ಪಿಸುವ ಮೂಲಕ ಸರ್ಕಾರವು ಅಭಿಯಾನವನ್ನು ವಿಸ್ತರಿಸಿತ್ತು.