ಆಲಪ್ಪುಳ: ಕೇರಳ ವಿಧಾನಸಭೆಯ ಮಾಜಿ ಸ್ಪೀಕರ್ ಪಿ. ಶ್ರೀರಾಮಕೃಷ್ಣರ ಗನ್ ಮ್ಯಾನ್ ಅವರ ಪಿಸ್ತೂಲ್ ಇದ್ದ ಬ್ಯಾಗ್ ಕಳೆದು ಹೋಗಿತ್ತು. ಗನ್ ಮ್ಯಾನ್ ಕೆ.ರಾಜೇಶ್ ಅವರು ಪ್ರಯಾ|ಣಿಸುವ ವೇಳೆ ಬ್ಯಾಗ್ ಕಳೆದುಹೋಗಿದೆ. ಪಿಸ್ತೂಲ್ ಜೊತೆಗೆ ಬ್ಯಾಗ್ ನೊಳಗೆ ಹತ್ತು ಸುತ್ತು ಗುಂಡುಗಳಿದ್ದವು. ಘಟನೆ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಎರ್ನಾಕುಳಂನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದಾಗ ಬ್ಯಾಗ್ ಕಳೆದು ಹೋಗಿದೆ. ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಶ್ರೀರಾಮಕೃಷ್ಣರನ್ನು ಬಿಟ್ಟು ರಾಜೇಶ್ ವಾಪಸಾಗುತ್ತಿದ್ದರು. ಗನ್ ಮ್ಯಾನ್ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ತಿರುವನಂತಪುರಕ್ಕೆ ಮರಳುತ್ತಿದ್ದರು. ಕಾಯಂಕುಳಂನಲ್ಲಿ ಬ್ಯಾಗ್ ಕಳೆದು ಹೋಗಿರುವ ವಿಷಯ ರಾಜೇಶ್ ಗೆ ತಿಳಿಯಿತು. ಕೂಡಲೇ ಪೋಲೀಸರಿಗೆ ದೂರು ನೀಡಿದ್ದಾರೆ.
ಪ್ರಯಾಣದ ವೇಳೆ ಬ್ಯಾಗ್ ಕಳೆದುಹೋಗಿರಬಹುದೆಂದು ಎಂದು ತೀರ್ಮಾನಿಸಲಾಗಿದೆ. ರಾಜೇಶ್ ನೀಡಿದ ದೂರಿನ ಮೇರೆಗೆ ಕಾಯಂಕುಳಂ ಠಾಣೆ ಇನ್ಸ್ ಪೆಕ್ಟರ್ ಮೊಹಮ್ಮದ್ ಶಫಿ ತನಿಖೆ ನಡೆಸುತ್ತಿದ್ದಾರೆ.