ನವದೆಹಲಿ: ಭಾರತದ ಕೋವಿಡ್-19 ಲಸಿಕಾ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ ಇಲ್ಲಿಯವರೆಗೂ 110 ದೇಶಗಳು ಒಪ್ಪಿಕೊಂಡಿರುವುದಾಗಿ ಅಧಿಕೃತ ಮೂಲವೊಂದು ಗುರುವಾರ ತಿಳಿಸಿದೆ.
ಕೇಂದ್ರ ಸರ್ಕಾರ ವಿಶ್ವದ ಇತರ ಭಾಗಗಳೊಂದಿಗೆ ಸಂವಹನವನ್ನು ಮುಂದುವರೆಸಿದೆ. ಇದರಿಂದ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಗುರುತಿಸಲಾಗುತ್ತದೆ. ಅದರೊಂದಿಗೆ ಶಿಕ್ಷಣ, ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳ ಪ್ರಯಾಣ ಸುಲಭಗೊಳಿಸಲಾಗುತ್ತಿದೆ.
ಪ್ರಸ್ತುತ, 110 ದೇಶಗಳು ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ ಒಪ್ಪಿಕೊಂಡಿವೆ ಮತ್ತು ಡಬ್ಲ್ಯುಎಚ್‌ಒ ರಾಷ್ಟ್ರೀಯವಾಗಿ ಅನುಮೋದಿತ ಕೋವಿಡ್ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರ ಭಾರತೀಯ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಮಾನ್ಯತೆಗೆ ಒಪ್ಪಿಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಷ್ಟ್ರೀಯವಾಗಿ ಅಥವಾ ಡಬ್ಲ್ಯೂಎಚ್ ಒ ಮಾನ್ಯತೆ ಪಡೆದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆ ಕುರಿತು ಭಾರತದೊಂದಿಗೆ ಒಪ್ಪಂದವನ್ನು ಹೊಂದಿರುವ ಅನೇಕ ದೇಶಗಳಿವೆ. ಅದೇ ರೀತಿಯಲ್ಲಿ ಭಾರತದೊಂದಿಗೆ ಅಂತಹ ಒಪ್ಪಂದ ಹೊಂದಿಲ್ಲದ ರಾಷ್ಟ್ರಗಳು ಕೂಡಾ ಇವೆ ಆದರೆ, ಅವರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಷ್ಟ್ರೀಯವಾಗಿ ಅಥವಾ ಡಬ್ಲ್ಯೂಎಚ್ ಒ ಮಾನ್ಯತೆ ಪಡೆದ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ಭಾರತೀಯ ನಾಗರಿಕರಿಗೆ ವಿನಾಯಿತಿ ನೀಡುತ್ತಾರೆ.