HEALTH TIPS

ಕಾಸರಗೋಡಿನ ಎಂಡೋ ಪೀಡಿತ ಕುಟುಂಬಳಿಗೆ 119.34 ಕೋಟಿ ಪರಿಹಾರ ವಿತರಿಸಲಾಗಿದೆ: ಸಚಿವೆಯಿಂದ ವಿಧಾನ ಸಭೆಯಲ್ಲಿ ಮಾಹಿತಿ

 

                  ತಿರುವನಂತಪುರ: ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಕಾಸರಗೋಡಿನ ಎಂಡೋಸಲ್ಫಾನ್ ದುರಂತಕ್ಕೆ ಒಳಗಾದ 3014 ಸಂತ್ರಸ್ತರಿಗೆ ಇದುವರೆಗೆ ಒಟ್ಟು 119.34 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಕೇರಳ ಸರ್ಕಾರ ಮಂಗಳವಾರ ಹೇಳಿದೆ.

                        ಶೀಘ್ರ ಪರಿಹಾರ ವಿತರಣೆ ಮತ್ತು ವಿವಿಧ ಪುನರ್ವಸತಿ ಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಅವರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದ ವಾರಗಳ ನಂತರದಲ್ಲಿ ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ಅವರು ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.


                    ಐಯುಎಂಎಲ್ ಶಾಸಕ ಯು.ಎ.ಲತೀಫ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಸರಗೋಡು ಉತ್ತರದ ಪ್ರದೇಶವಾದ ಮುಳಿಯಾರ್‍ನಲ್ಲಿ ಉದ್ದೇಶಿತ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು. '2017ರ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಎಂಡೋಸಲ್ಫಾನ್ ದುರಂತದ 3014 ಸಂತ್ರಸ್ತರಿಗೆ ಒಟ್ಟು 119.34 ಕೋಟಿ ಪರಿಹಾರ ವಿತರಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ' ಎಂದು ಸಚಿವೆ ಬಿಂದು ಹೇಳಿದರು.

                ಸಾಮಾಜಿಕ ಭದ್ರತಾ ಮಿಷನ್ ಮೂಲಕ ಸಂತ್ರಸ್ತರಿಗೆ ಮಾಸಿಕ ಪಿಂಚಣಿ, ಅವರನ್ನು ನೋಡಿಕೊಳ್ಳುವವರಿಗೆ 'ಆಶ್ವಾಸಕಿರಣ' ಪಿಂಚಣಿ, 3ಲಕ್ಷ ವರೆಗಿನ ಬ್ಯಾಂಕ್ ಸಾಲ ಮನ್ನಾ, ಸಾರಿಗೆ ಸೌಲಭ್ಯ, ಸಂತ್ರಸ್ತ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ಪಡಿತರ ಮೊದಲಾದ ಕ್ರಮಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಅವರು ವಿವರ ನೀಡಿದರು.

                     ಎಂಡೋಸಲ್ಫಾನ್ ಭಾಗಶಃ ಪರವಾನಗಿ ಪಡೆದ ಕೀಟನಾಶಕವಾಗಿದೆ. 2011ರಲ್ಲಿ ಸುಪ್ರೀಂಕೋರ್ಟ್ ಇದರ ಉತ್ಪಾದನೆ ಮತ್ತು ವಿತರಣೆಯನ್ನು ನಿಷೇಧಿಸುವವರೆಗೆ ಕೀಟನಾಶಕವನ್ನು ಗೇರು,  ಹತ್ತಿ, ಚಹಾ, ಭತ್ತ, ಹಣ್ಣುಗಳು ಮತ್ತು ಇತರ ಬೆಳೆಗಳ ಮೇಲೆ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಎಂಡೋಸಲ್ಫಾನ್ ಬಳಕೆಯು ಕಾಸರಗೋಡಿನ ಎಣ್ಮಕಜೆ, ಕುಂಬ್ಡಾಜೆ, ಮುಳಿಯಾರು, ಬೆಳ್ಳೂರು ಗ್ರಾ.ಪಂ. ವ್ಯಾಪ್ತಿ ಪ್ರದೇಶಗಳಲ್ಲಿ ಅನೇಕ ವ್ಯಕ್ತಿಗಳು, ವಿಶೇಷವಾಗಿ ಮಕ್ಕಳಿಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದೆ ಎಂದು ಸತತ ಹೋರಾಟಗಳು ನಡೆಯುತ್ತಿವೆ. ಇದು ವಿಷದ ಅಂಶವನ್ನು ಹೊಂದಿದ್ದು ಜೆನೆಟಿಕ್ ಮೂಲಕ ವಂಶದಿಂದ ವಂಶಕ್ಕೆ ಹರಡುತ್ತಿದ್ದು, ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries