HEALTH TIPS

ಕನಿಷ್ಠ ಪ್ರಯಾಣ ದರ 12 ರೂ., ವಿದ್ಯಾರ್ಥಿ ರಿಯಾಯ್ತಿ 6 ರೂ.ಗೆ ಏರಿಕೆ: ಇಂದು ಸಾರಿಗೆ ಸಚಿವರಿಂದ ಬಸ್ ದರ ಏರಿಕೆ ಕುರಿತು ಮಾಲೀಕರೊಂದಿಗೆ ಚರ್ಚೆ


        ತಿರುವನಂತಪುರ: ರಾಜ್ಯದಲ್ಲಿ ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆಯಾಗುವ ಸೂಚನೆಗಳಿವೆ.  ಸಾರಿಗೆ ಸಚಿವ ಆಂಟನಿ ರಾಜು ಇಂದು ಖಾಸಗಿ ಬಸ್ ಮಾಲೀಕರೊಂದಿಗೆ ಚರ್ಚೆ ನಡೆಸಲಿದ್ದಾರೆ.  ಸಂಜೆ 4.30ಕ್ಕೆ ತಿರುವನಂತಪುರದಲ್ಲಿ ಚರ್ಚೆ ನಡೆಯಲಿದೆ.  ಹಿಂದಿನ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳದ ಭರವಸೆ ನೀಡಿತ್ತು.
        ಕನಿಷ್ಠ ದರವನ್ನು 12 ರೂ.ಗೆ ಹೆಚ್ಚಿಸಬೇಕು, ವಿದ್ಯಾರ್ಥಿಗಳಿಗೆ ಕನಿಷ್ಠ 6 ರೂ ರಿಯಾಯಿತಿ ದರ ನಿಗದಿಪಡಿಸಬೇಕು ಮತ್ತು ಕೊರೊನಾ ಅವಧಿ ಮುಗಿಯುವವರೆಗೆ ಬಸ್ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಬಸ್ ಮಾಲೀಕರು ಒತ್ತಾಯಿಸಿದ್ದಾರೆ.  ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದರು.
        ಇದೇ ವೇಳೆ, ವಿವರವಾದ ಸಮಾಲೋಚನೆಯ ನಂತರವೇ ವಿದ್ಯಾರ್ಥಿಗಳ ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.  ಬಸ್ ಮಾಲಕರು ಎತ್ತಿರುವ ಎಲ್ಲ ಸಮಸ್ಯೆಗಳನ್ನು ಹತ್ತು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.
          2018ರಲ್ಲಿ ಕೊನೆಯ ಬಾರಿಗೆ ಬಸ್ ದರ ಏರಿಕೆಯಾಗಿತ್ತು.  ಅಮದು ಎಂಟು ರೂ.ಗಳಿಗೆ ನಿಗದಿಪಡಿಸಲಾಗಿತ್ತು.  ಆಗ ಡೀಸೆಲ್ 63 ರೂ. ಗಳಷ್ಟೇ ಇತ್ತು. ಇದೀಗ ಡೀಸೆಲ್ ಬೆಲೆ 95 ರೂ.ಗಳ ಆಸುಪಾಸಿನಲ್ಲಿದ್ದು, ಕನಿಷ್ಠ ಪ್ರಯಾಣ ದರ ಮತ್ತು ವಿದ್ಯಾರ್ಥಿಗಳ ಪ್ರಯಾಣ ದರವನ್ನು ಏರಿಸದೆ ಮುಂದುವರಿಯಲು ಸಾಧ್ಯವಿಲ್ಲ ಎನ್ನುತ್ತಾರೆ ಬಸ್ ಮಾಲೀಕರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries