ಕರೂರ್: ತಮಿಳುನಾಡಿನ ಕರೂರಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ 12ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಕೆಲವು ದಿನಗಳ ನಂತರ ನಿನ್ನೆ ತಡರಾತ್ರಿ ಆರೋಪಿತ ಗಣಿತ ಶಿಕ್ಷಕ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರೂರ್: ತಮಿಳುನಾಡಿನ ಕರೂರಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ 12ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಕೆಲವು ದಿನಗಳ ನಂತರ ನಿನ್ನೆ ತಡರಾತ್ರಿ ಆರೋಪಿತ ಗಣಿತ ಶಿಕ್ಷಕ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರವಣನ್(42) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಸಾವಿಗೂ ಮುನ್ನ ಶಿಕ್ಷಕ ಡೆತ್ನೋಟ್ ಅನ್ನು ಬರೆದಿದ್ದು, ಇದರಲ್ಲಿ ವಿದ್ಯಾರ್ಥಿನಿ ಮೃತಪಟ್ಟ ನಂತರ ಆಕೆಯ ಸಾವಿನ ಬಗ್ಗೆ ಜನರು ಮತ್ತು ವಿದ್ಯಾರ್ಥಿಗಳು ಗೇಲಿ ಮಾಡುತ್ತಿದ್ದರು. ಇದರಿಂದ ಮುಜುಗರಕ್ಕೊಳಗಾಗಿ ಹಾಗೂ ಹುಡುಗಿ ಯಾರ ಹೆಸರನ್ನೂ ಹೇಳದಿದ್ದರೂ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು ಎಂದು ಪತ್ರದಲ್ಲಿ ಬರೆಯಲಾಗಿದೆ.
ಕಳೆದ ವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ 12ನೇ ತರಗತಿ ವಿದ್ಯಾರ್ಥಿನಿ ಡೆತ್ನೋಟ್ನಲ್ಲಿ ಹೀಗೆ ಬರೆದಿದ್ದಾಳೆ. ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು. ನನ್ನ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗಿದೆ. ನಾನು ಈ ಭೂಮಿಯ ಮೇಲೆ ದೀರ್ಘಕಾಲ ಬದುಕಲು ಮತ್ತು ಇತರರಿಗೆ ಸಹಾಯ ಮಾಡಲು ಬಯಸಿದ್ದೆ, ಆದರೆ ಈಗ ನಾನು ಈ ಪ್ರಪಂಚವನ್ನು ಬೇಗನೆ ತೊರೆಯಬೇಕಾಗಿದೆ ಎಂದು ಬರೆಯಲಾಗಿತ್ತು.
ತನಿಖೆಯ ಭಾಗವಾಗಿ, ಪೊಲೀಸರು ಈಗಾಗಲೇ ಆಕೆಯ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಸರವಣನ್ ಅವರನ್ನೂ ಪ್ರಶ್ನಿಸಲಾಗಿತ್ತು. ಇದರಿಂದ ಒತ್ತಡಕ್ಕೊಳಗಾದ ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣಿತ ಶಿಕ್ಷಕನ ಮೇಲೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೂ ಸರವಣನ್ ನಿನ್ನೆ ರಾತ್ರಿ ತಿರುಚ್ಚಿಯಲ್ಲಿರುವ ತಮ್ಮ ಮಾವನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.