ಪೆರ್ಲ; ಎಣ್ಮಕಜೆ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ 12ನೇ ವರ್ಷದ ಜಬ್ಬಾರ್ ಸಂಸ್ಮರಣೆಯು ಪೆರ್ಲದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಜಬ್ಬಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಬಳಿಕ ಸಂಸ್ಮರಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಕ್ರಮ ರಾಜಕೀಯದ ಅಮಾನುಷತೆಗೆ ಜೀವ ಬಲಿದಾನಗೈದ ಜಬ್ಬಾರ್ ಪಕ್ಷ ನಿಷ್ಠೆಯಿಂದ ಸದಾ ಅಮರರಾಗಿದ್ದಾರೆ ಎಂದರು. ಎಣ್ಮಕಜೆ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆವಹಿಸಿದ್ದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್, ಯೂತ್ ರಾಜ್ಯ ಸಮಿತಿ ಕಾರ್ಯದರ್ಶಿ ನೋಯಲ್ ಜೋಸೆಫ್, ಜಿಲ್ಲಾ ಉಪಾಧ್ಯಕ್ಷ ಮನಾಫ್ ನುಳ್ಳಿಪ್ಪಾಡಿ, ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಬಿ.ಅಬ್ದುಲ್ ರಹಿಮಾನ್, ವಿಲ್ಫ್ರೆಡ್ ಡಿಸೋಜ, ಅಬ್ದುಲ್ಲ ಕುರೆಡ್ಕ, ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಸಾಜಿದ್ ಮೌವೆಲ್, ಜಿಲ್ಲಾ ಕಾರ್ಯದರ್ಶಿ ಕಾರ್ತಿಕೇಯನ್, ರಾಧಾಕೃಷ್ಣ ನಾಯಕ್ ಶೇಣಿ, ಜಯಶ್ರೀ ಎ.ಕುಲಾಲ್, ಕುಸುಮಾವತಿ ಬಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲಾಧ್ಯಕ್ಷ ನಿಸಾರ್ ಬಣ್ಪುತ್ತಡ್ಕ ವಂದಿಸಿದರು.