ಕುಂಬಳೆ: ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಅವರ ಹವಿ-ಸವಿ ಕೋಶ(ಹವ್ಯಕ ಕನ್ನಡ ನಿಘಂಟು) ಎಂಬ ವಿಶಿಷ್ಟ ಗ್ರಂಥವನ್ನು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ. ವಿ ಬಿ ಅರ್ತಿಕಜೆ ಇದೇ ನವಂಬರ್ 14ರಂದು ಬೆಳಗ್ಗೆ 10 ಗಂಟೆಗೆ ಕುಂಬಳೆ ಸಮೀಪದ ನಾರಾಯಣಮಂಗಲದ ಕುಳಮರ್ವ ಅವರ ಸ್ವಗೃಹ 'ಶ್ರೀನಿಧಿ'ಯಲ್ಲಿ ಬಿಡಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ರಮಾನಂದ ಬನಾರಿ, ಡಾ. ತಾಳ್ತಜೆ ವಸಂತ ಕುಮಾರ್, ಡಾ.ಶ್ರೀಕೃಷ್ಣ ಭಟ್, ಡಾ.ಹರಿಕೃಷ್ಣ ಭರಣ್ಯ, ಡಾ.ಪಾದೆಕಲ್ಲು ವಿಷ್ಣು ಭಟ್ ಮೊದಲಾವರು ಭಾಗವಹಿಸಲಿದ್ದಾರೆ. ಈ ಗ್ರಂಥದಲ್ಲಿ ಹವ್ಯಕ ಭಾಷೆಯ ಸುಮಾರು 10 ಸಾವಿರ ಶಬ್ಧಗಳಿಗೆ ಅಕಾರಾದಿಯಾಗಿ ಕನ್ನಡ ಭಾಷೆಯ ಅರ್ಧ ಹಾಗೂ ವಿವರಣೆಯನ್ನು ನೀಡಲಾಗಿದೆ. ಸುಮಾರು 500ಕ್ಕೂ ಹೆಚ್ಚು ಪುಟಗಳಿರುವ ಈ ಗ್ರಂಥದಲ್ಲಿ ಹವಿಗನ್ನಡದ ವಿಶೇಷ ಪದಗಳನ್ನು ಸಂಯೋಜನೆಗೊಳಿಸಲಾಗಿದೆ.