ಮುಂಬೈ: ಓಮಿಕ್ರಾನ್ ಭೀತಿ ವಿಶ್ವದ ಎಲ್ಲ ರಾಷ್ಟ್ರಗಳಿಗೂ ತಟ್ಟಿದೆ. ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು, ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ಕಟ್ಟೆಚ್ಚರವಹಿಸಿವೆ. ಈ ಮಧ್ಯೆ ಆಫ್ರಿಕನ್ ದೇಶಗಳಿಂದ ಸಾವಿರ ಪ್ರಯಾಣಿಕರು ಮುಂಬೈಗೆ ಬಂದಿಳಿದಿರುವ ವಿಚಾರ ಬೆಳಕಿಗೆ ಬಂದಿದೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿ ಹೇಳಿಕೆ ಪ್ರಕಾರ, ಕಳೆದ 15 ದಿನಗಳಲ್ಲಿ ಆಫ್ರಿಕನ್ ದೇಶಗಳಿಂದ 1 ಸಾವಿರ ಪ್ರಯಾಣಿಕರು ಮುಂಬೈ ತಲುಪಿದ್ದಾರೆ ಅಂತಾ ತಿಳಿಸಿದ್ದಾರೆ. ಈ ಪೈಕಿ ಕೇವಲ 466 ಜನರ ಪಟ್ಟಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆಯಲಾಗಿದೆ.
ಇಲ್ಲಿಯವರೆಗೆ 100 ವಿದೇಶಿ ಪ್ರಯಾಣಿಕರ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಅಂತಾ ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ಜನರ ಪಟ್ಟಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಇನ್ನೂ ಕೂಡ ಸ್ವೀಕರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೋವಿಡ್ ಪರೀಕ್ಷೆ ವಿಳಂಬವಾಗುತ್ತಿದೆ ಎಂದು ಬಿಎಂಸಿ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಸುರೇಶ್ ಕಾಕಾನಿ ಹೇಳಿದ್ದಾರೆ.
466 ಪ್ರಯಾಣಿಕರ ಪೈಕಿ 100 ಮಂದಿ ಮುಂಬೈ ಮೂಲದವರಾಗಿದ್ದಾರೆ. ನಾವು ಈಗಾಗಲೇ ಅವರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ನಾಳೆ ಅಥವಾ ಮರುದಿನ ಅವರ ವರದಿಯನ್ನು ನಿರೀಕ್ಷಿಸಲಾಗಿದೆ” ಅಂತಾ ಸುರೇಶ್ ಕಾಕಾನಿ ತಿಳಿಸಿದ್ದಾರೆ.