ಶ್ರೀನಗರ: ಕಾಶ್ಮೀರದಾದ್ಯಂತ ಶನಿವಾರ ತೀವ್ರತರ ಚಳಿ ಆರಂಭವಾಗಿದ್ದು, ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.
ಶ್ರೀನಗರ: ಕಾಶ್ಮೀರದಾದ್ಯಂತ ಶನಿವಾರ ತೀವ್ರತರ ಚಳಿ ಆರಂಭವಾಗಿದ್ದು, ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.
ರಾಜಧಾನಿ ಶ್ರೀನಗರದಲ್ಲಿ ಮೈನಸ್ 1.5 ಡಿಗ್ರಿ ಸೆಲ್ಸಿಯಸ್, ಪಹಲ್ಗಾಮ್‌ನಲ್ಲಿ ಮೈನಸ್ 4.3 ಡಿಗ್ರಿ ಸೆಲ್ಸಿಯಸ್, ಕುಪ್ವಾರದಲ್ಲಿ ಮೈನಸ್ 2.7, ಗುಲ್ ಮಾರ್ಗ್‌ನಲ್ಲಿ ಮೈನಸ್ 1, ಕ್ವಾಜಿಗುಂಡದಲ್ಲಿ ಮೈನಸ್ 1.8, ಕೋಕನಾರ್ಗ್‌ನಲ್ಲಿ ಮೈನಸ್ 1.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಶನಿವಾರ ಮುಂಜಾನೆ ಕಾಶ್ಮೀರದ ಬಹುತೇಕ ಭಾಗಗಳಲ್ಲಿ ದಟ್ಟನೆಯ ಮಂಜು ಕವಿದ ವಾತಾವರಣದಿಂದ ಕೂಡಿದ್ದು, ಇದರಿಂದ ವಾಹನ ಸವಾರರ ಸಂಚಾರಕ್ಕೆ ಅಡಚಣೆ ಉಂಟಾಗಿದೆ.