ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ನೇತೃತ್ವದಲ್ಲಿ ಶ್ರೀಮದ್ ಎಡನೀರು ಮಹಾಸಂಸ್ಥಾನ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕøತಿಕ ಉತ್ಸವ ವಿಶೇಷ ಕಾರ್ಯಕ್ರಮ ನ.18 ರಂದು ಬೆಳಿಗ್ಗೆ 10.30 ರಿಂದ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗÀವಾಗಿ ಬೆಳಿಗ್ಗೆ 10ಕ್ಕೆ ಜಾಗೃತಿ ಉತ್ಸವ ಮೆರವಣಿಗೆ ನಡೆಯಲಿದ್ದು, ಮಂಜೇಶ್ವರ ಶಾಸಕ ಎಕೆಎಂ ಅ|ಶ್ರಫ್ ಉದ್ಘಾಟಿಸುವರು. ಬಳಿಕ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಸಂಸದ ರಾಜಮೋಹನ ಉಣ್ಣಿತ್ತಾನ್ ಉದ್ಘಾಟಿಸುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅ|ಧ್ಯಕ್ಷತೆ ವಹಿಸುವರು. ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಶಂಕರ ರೈ ಮಾಸ್ತರ್, ಕಾಸರಗೋಡು ಕನ್ನಡ ಹೋರಾಟ ಸಮಿತಿ ಅ|ಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ, ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ, ರಂಗಚಿನ್ನಾರಿ ಕಾಸರಗೋಡು ಇದರ ಅಧ್ಯಕ್ಷ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅ|ಧ್ಯಕ್ಷ ಡಾ.ಸಿ.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡುವರು.
ಮಧ್ಯಾಹ್ನ 12 ರಿಂದ 1ರ ವರೆಗೆ ಕಾಸರಗೋಡು ಕನ್ನಡ-ಪ್ರಚಲಿತ ವಿದ್ಯಮಾನಗಳು ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು, ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ವಿಷಯ ಮಂಡಿಸುವರು. ವಿಶ್ರಾಂತ ಉಪನ್ಯಾಸಕ ಡಾ.ನಾ.ದಾಮೋದರ ಶೆಟ್ಟಿ ಅ|ಧ್ಯಕ್ಷತೆ ವಹಿಸುವರು. ಬಳಿಕ ರಮೇಶ ಚಂದ್ರ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2.15 ರಿಂದ ದ್ವಿಭಾಷಾ ಕವಿಗೋಷ್ಠಿ ನಡೆಯಲಿದ್ದು, ದಯಾನಂದ ರೈ ಕಳುವಾಜೆ ಅ|ಧ್ಯಕ್ಷತೆ ವಹಿಸುವರು. ಪದ್ಮಾವತಿ ಏದಾರು, ದಿವಾಕರ ಬಲ್ಲಾಳ್ ಎ.ಬಿ., ಲತಾ ಬನಾರಿ, ಚೇತನ್ ವರ್ಕಾಡಿ, ಕಾರ್ತಿಕ್ ಪಡ್ರೆ, ಪ್ರೇಮಚಂದ್ರ ಚೋಂಬಾಲ, ವಿನೋದ್ ಕುಮಾರ್ ಪೆರುಂಬಳ, ರಾಘವನ್ ಬೆಳ್ಳಿಪ್ಪಾಡಿ, ಅಜೇ|ಶ್ ತೋಟ್ಟತ್ತಿಲ್ ಭಾಗವಹಿಸುವರು. ಅಪರಾಹ್ನ 3 ರಿಂದ ಸ್ಥಳೀಯ ಸಂಘಸಂಸ್ಥೆಗಳೊಂದಿಗೆ ಗಡಿನಾಡ ಕನ್ನಡಿಗರ ಸ್ಥಿತಿಗತಿಯ ಸಮಾಲೋಚನೆ ನಡೆಯಲಿದೆ.
ಸಂಜೆ 5 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅ|ಧ್ಯಕ್ಷ ಡಾ.ಸಿ.ಸೋಮಶೇಖರ ಅಧ್ಯಕ್ಷತೆ ವಹಿಸುವರು. |ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿರುವರು. ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ|ವರ ಭಟ್ ಎಂ.ವಿ ಸಮಾರೋಪ ಭಾಷಣ ಮಾಡುವರು. ಶಿಕ್ಷಣ ತಜ್ಞ, ಕನ್ನಡ ಹೋರಾಟಗಾರ ಬಿ.ಪುರುಷೋತ್ತಮ ಮಾಸ್ತರ್ ಕಾಸರಗೋಡು ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಕೇರಳ ತುಳು ಅಕಾಡೆಮಿ ಅ|ಧ್ಯಕ್ಷ ಎಂ.ಉಮೇಶ ಸಾಲ್ಯಾನ್, ಪತ್ರಕರ್ತ ರಾಜೇಶ್ ರೈ ಚಟ್ಲ, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾದರ ಯಾದವ್ ತೆಕ್ಕೆಮೂಲೆ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಉಪಸ್ಥಿತರಿರುವರು. ಬಳಿಕ ಸಾಂಸ್ಕøತಿಕ ವೈವಿಧ್ಯಗಳು ನಡೆಯಲಿದ್ದು, ಮಂಜುಳಾ ಪರಮೇಶ ಬೆಂಗಳೂರು(ನೃತ್ಯ ರೂಪಕ), ಅಭಿಜ್ಞಾ ಹರೀಶ್ ಕರಂದಕ್ಕಾಡು(ಯೋಗ ನೃತ್ಯ), ಸಮನ್ವಿತಾ ಗಣೇಶ್ ಅಣಂಗೂರು(ಭಕ್ತಿಸಂಗೀತ), ಸುಜಾತಾ ತಂಡದವರಿಂದ ನೃತ್ಯ ವೈವಿಧ್ಯ, ಬೆಳ್ಳೂರು ಸಹೋದರರಿಂದ ಜಾನಪದ ನೃತ್ಯ, ಬಿಂದು ಶ್ರೀಧರನ್ ಮುಳಿಯಾರ್ ತಂಡದವರಿಂದ ತಿರುವಾದಿರ ನೃತ್ಯಗಳು ನಡೆಯಲಿವೆ.