ಕಾಞಂಗಾಡ್: ಕಾಸರಗೋಡು ನೀಲೇಶ್ವರದಲ್ಲಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 1800 ಲೀಟರ್‌ಗೂ ಅಧಿಕ ಸ್ಪಿರಿಟ್ ಹಾಗೂ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಸ್ಪೆಷಲ್ ಸ್ಕ್ವಾಡ್ ನಡೆಸಿದ ತಪಾಸಣೆ ವೇಳೆ ಇವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಮಂಜೇರಿ ಮೂಲದ ಜೈನುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ.
1890 ಲೀಟರ್ ಸ್ಪಿರಿಟ್ ಹಾಗೂ 1323 ಲೀಟರ್ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ. ಲಾರಿ ಗೋವಾದಿಂದ ತ್ರಿಶೂರ್ ಕಡೆಗೆ ಪಯಿಂಟ್ ತುಂಬಿಕೊಂಡು ಬರುತ್ತಿತ್ತು. ಪೈಂಟ್ ಪಾತ್ರೆಗಳ ನಡುವೆ ಸ್ಪಿರಿಟ್ ಮತ್ತು ಮದ್ಯವನ್ನು ಕಳ್ಳಸಾಗಣೆ ಮಾಡಲಾಗಿತ್ತು. ಲಾರಿ ಪಾಲಕ್ಕಾಡ್ ನಿವಾಸಿಯೊಬ್ಬರದ್ದು ಎಂದು ತಿಳಿದು ಬಂದಿದೆ.