ನವದೆಹಲಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ ಲಸಿಕೆಗಳನ್ನು ಖರೀದಿಸುವುದಕ್ಕಾಗಿ 1.5 ಬಿಲಿಯನ್ (11,185 ಕೋಟಿ) ರೂಪಾಯಿಗಳ ಸಾಲವನ್ನು ಅನುಮೋದಿಸಿದೆ.
ಕೋವಿಡ್-19 ಲಸಿಕೆ ಖರೀದಿಸಲು ಭಾರತಕ್ಕೆ 1.5 ಬಿಲಿಯನ್ ಡಾಲರ್ ADB ಸಾಲ!
0
ನವೆಂಬರ್ 25, 2021
Tags
ನವದೆಹಲಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ ಲಸಿಕೆಗಳನ್ನು ಖರೀದಿಸುವುದಕ್ಕಾಗಿ 1.5 ಬಿಲಿಯನ್ (11,185 ಕೋಟಿ) ರೂಪಾಯಿಗಳ ಸಾಲವನ್ನು ಅನುಮೋದಿಸಿದೆ.
ಈ ಸಂಬಂಧ ಎಡಿಬಿ ಪ್ರಕಟಣೆ ಮಾಡಿದ್ದು, ಇದೇ ಯೋಜನೆಗಾಗಿ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎಐಐಬಿ) ಹೆಚ್ಚುವರಿ 500 ಮಿಲಿಯನ್ ಡಾಲರ್ ನೀಡುವ ನಿರೀಕ್ಷೆ ಇದೆ ಎಂದು ಎಡಿಬಿ ಹೇಳಿದೆ.
ಎಡಿಬಿಯಿಂದ ಪಡೆಯಲಾಗಿರುವ ಆರ್ಥಿಕ ನೆರವಿನಿಂದ 66.7 ಕೋಟಿ ಕೋವಿಡ್-19 ಲಸಿಕೆ ಡೋಸ್ ಗಳನ್ನು ಖರೀದಿಸಬಹುದಾಗಿದ್ದು 31.7 ಕೋಟಿ ಮಂದಿಗೆ ನೀಡಬಹುದಾಗಿದೆ.
18 ವರ್ಷಗಳ ಮೇಲ್ಪಟ್ಟ 94.47 ಕೋಟಿ ಮಂದಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುವ ಭಾರತದ ರಾಷ್ಟ್ರೀಯ ನಿಯೋಜನೆ ಮತ್ತು ವ್ಯಾಕ್ಸಿನೇಷನ್ ಯೋಜನೆಗೆ ಎಡಿಬಿ ಆರ್ಥಿಕ ನೆರವು ಬೆಂಬಲವಾಗಿದೆ. ಎಡಿಬಿಯಿಂದ 4 ಮಿಲಿಯನ್ (ಅಂದಾಜು 30 ಕೋಟಿ ರೂಪಾಯಿ) ತಾಂತ್ರಿಕ ನೆರವು ಯೋಜನೆ ದೇಶದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಎಡಿಬಿ ತಿಳಿಸಿದೆ.