HEALTH TIPS

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಕೇಂದ್ರ ಸರ್ಕಾರದ ಹೊಸ ಕೊವಿಡ್-19 ಮಾರ್ಗಸೂಚಿ

                     ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದ ಹಿನ್ನೆಲೆ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣದ ಮಾರ್ಗಸೂಚಿಗಳನ್ನು ಗುರುವಾರ ಸಡಿಲಗೊಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣ ಆರಂಭಕ್ಕೂ ಮೊದಲು ಮತ್ತು ನಂತರದಲ್ಲಿ ಕೊವಿಡ್-19 ಪರೀಕ್ಷೆ ಇಲ್ಲದೇ 5 ವರ್ಷದೊಳಗಿನ ಮಕ್ಕಳು ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗಿದೆ.

                 ಕೇಂದ್ರ ಸರ್ಕಾರದ ನಿರ್ಧಾರವು ಪ್ರವಾಸೋದ್ಯಮ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಕ್ಕೆ ಪೂರಕವಾಗಲಿದೆ ಎಂಬ ವಿಶ್ವಾಸವಿದೆ. ಹೊಸ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣೆಯ ವಿಧಾನವು ನವೆಂಬರ್ 12ರಿಂದ ಮುಂದಿನ ಆದೇಶದವರೆಗೂ ಜಾರಿಯಲ್ಲಿರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

                ಪರಿಷ್ಕೃತ ಆದೇಶದಲ್ಲಿ ಮಕ್ಕಳು ಆಗಮಿಸಿದ ವೇಳೆ ಅಥವಾ ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಕೊರೊನಾವೈರಸ್ ಸೋಂಕಿನ ಲಕ್ಷಣ ಕಂಡುಬಂದರೆ, ಅವರನ್ನು ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ನಿಗದಿಪಡಿಸಿದ ಶಿಷ್ಟಾಚಾರಗಳ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. COVID-19 ಸಾಂಕ್ರಾಮಿಕದ ರೋಗವು ಕೆಲವು ಪ್ರಾದೇಶಿಕ ಮಟ್ಟದಲ್ಲಿ ಬದಲಾವಣೆಗಳೊಂದಿಗೆ ಕಡಿಮೆಯಾಗುತ್ತಿದೆ ಎಂಬುದನ್ನೇ ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ನಿರಂತರವಾಗಿ ಬದಲಾಗುತ್ತಿರುವ ವೈರಸ್‌ನ ಸ್ವರೂಪ ಮತ್ತು SARS-CoV-2 ರೂಪಾಂತರಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

                        ಹೊಸ ಮಾರ್ಗಸೂಚಿ ಪ್ರಮುಖ ಅಂಶಗಳು:

* "5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಗಮನದ ಪೂರ್ವ ಮತ್ತು ನಂತರದ ಪರೀಕ್ಷೆಗಳಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಆಗಮನದ ಸಮಯದಲ್ಲಿ ಅಥವಾ ಹೋಮ್ ಕ್ವಾರಂಟೈನ್ ಅವಧಿಯಲ್ಲಿ COVID-19 ಗಾಗಿ ರೋಗಲಕ್ಷಣಗಳು ಕಂಡುಬಂದರೆ, ಅವರು ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ನಿಗದಿಪಡಿಸಿದ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡುತ್ತಾರೆ, "ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

* ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣಿಕರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದರೆ ಮತ್ತು WHO ಅನುಮೋದಿತ COVID-19 ಲಸಿಕೆಗಳನ್ನು ಸ್ವೀಕರಿಸಲು ಅವಕಾಶವಿರುವ ದೇಶಗಳಿಂದ ಬಂದಿದ್ದರೆ ಆ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡಲಾಗುತ್ತದೆ. ಇಂಥ ಪ್ರಯಾಣಿಕರಿಗೆ ಯಾವುದೇ ರೀತಿ ಕ್ವಾರೆಂಟೈನ್ ಇರುವುದಿಲ್ಲ.

* ಆದಾಗ್ಯೂ, ಪ್ರಯಾಣಿಕರು ಆಗಮಿಸಿದ ನಂತರ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳಬೇಕಾಗುತ್ತದೆ

* ಒಂದು ವೇಳೆ ಪ್ರಯಾಣಿಕರು ಯಾವುದೇ ಲಸಿಕೆಯನ್ನು ಹಾಕಿಸಿಕೊಳ್ಳದಿದ್ದರೆ, ಅಂಥವರು ಪ್ರಯಾಣ ಆರಂಭಿಸುವುದಕ್ಕೂ ಮೊದಲು ಮತ್ತು ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಕ್ಕೂ ಮೊದಲು ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ

* ಹೋಮ್ ಕ್ವಾರಂಟೈನ್ ಸಮಯದಲ್ಲಿ ಪ್ರಯಾಣಿಕರಿಗೆ COVID-19 ಸೋಂಕಿನ ಲಕ್ಷಣಗಳು ಗೋಚರಿಸಿದರೆ ಅಥವಾ ಮರು-ಪರೀಕ್ಷೆಯಲ್ಲಿ COVID-19 ಸೋಂಕು ತಗುಲಿರುವುದು ದೃಢಪಟ್ಟದರೆ, ಅಂಥವರು ತಕ್ಷಣ ಸ್ವಯಂಪ್ರೇರಣೆಯಿಂದ ಪ್ರತ್ಯೇಕವಾಗಿರಬೇಕು. ಇದರ ಜೊತೆಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಈ ಬಗ್ಗೆ ಮಾಹಿತಿ ನೀಡಬೇಕು

* ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಕ್ಕೂ ಮೊದಲು ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗಬೇಕು

* ಆನ್‌ಲೈನ್‌ನಲ್ಲಿ ತುಂಬಿದ ಸ್ವಯಂ ಘೋಷಣೆಯ ನಮೂನೆಯನ್ನು ವಿಮಾನ ನಿಲ್ದಾಣದ ಆರೋಗ್ಯ ಸಿಬ್ಬಂದಿಗೆ ತೋರಿಸಬೇಕು

* ಸ್ಕ್ರೀನಿಂಗ್ ಸಮಯದಲ್ಲಿ ರೋಗಲಕ್ಷಣಗಳು ಕಂಡುಬಂದಲ್ಲಿ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries