ನವದೆಹಲಿ: ಪ್ರವಾಸೋದ್ಯಮ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 190 'ಭಾರತ್ ಗೌರವ್' ರೈಲುಗಳನ್ನು ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ತಿಳಿಸಿದ್ದಾರೆ.
ನವದೆಹಲಿ: ಪ್ರವಾಸೋದ್ಯಮ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 190 'ಭಾರತ್ ಗೌರವ್' ರೈಲುಗಳನ್ನು ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ತಿಳಿಸಿದ್ದಾರೆ.
ಖಾಸಗಿ ವಲಯ ಹಾಗೂ ಐಆರ್‌ಸಿಟಿಸಿ ಎರಡೂ ಈ ರೈಲುಗಳ ನಿರ್ವಹಣೆ ನಡೆಸಲಿದೆ ಎಂದೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ವೇಳಾಪಟ್ಟಿ ಆಧಾರದಲ್ಲಿ ಈ ರೈಲುಗಳು ಸಂಚಾರ ನಡೆಸಲಿದ್ದು, 190 ರೈಲುಗಳನ್ನು ಗುರುತಿಸಲಾಗಿದೆ. ಈ ರೈಲುಗಳು ದೇಶದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಲಿವೆ' ಎಂದು ಹೇಳಿದ್ದಾರೆ.
'ಜನರಿಗೆ ದೇಶದ ಪರಂಪರೆಯನ್ನು ತಿಳಿಸುವ ಉದ್ದೇಶದಿಂದ ಥೀಮ್ ಆಧಾರಿತ ರೈಲುಗಳನ್ನು ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದರು' ಎಂದೂ ತಿಳಿಸಿದ್ದಾರೆ.
'ಈ ರೈಲುಗಳ ಟಿಕೆಟ್ ದರಗಳನ್ನು ಪ್ರಾಯೋಗಿಕವಾಗಿ ಪ್ರವಾಸದ ಆಯೋಜಕರೇ ನಿರ್ಧರಿಸಲಿದ್ದಾರೆ' ಎಂದೂ ತಿಳಿಸಿದ್ದಾರೆ.
ಒಡಿಶಾ, ರಾಜಸ್ಥಾನ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈ ರೈಲುಗಳ ಬಗ್ಗೆ ಆಸಕ್ತಿ ತೋರಿಸಿವೆ ಎಂದೂ ಹೇಳಿದ್ದಾರೆ.