ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯತ್ ನಲ್ಲಿ ಡಿ.1ರಂದು ಡಯಾಲಿಸಿಸ್ ಸೆಂಟರ್ ಆರಂಭಗೊಳ್ಳಲಿದೆ. ವಯೋಮಿತಿಯಿಲ್ಲದ ಎಲ್ಲ ಕಿಡ್ನಿ ರೋಗಿಗಳ ಚಿಕಿತ್ಸೆಗಾಗಿ ಕಾರಡ್ಕ ಬ್ಲೋಕ್ ಪಂಚಾಯತ್ ಆಡಳಿತೆ ಸಮಿತಿ ಮುಳಿಯಾರು ಸಿ.ಎಚ್.ಸಿ.ಯಲ್ಲಿ ಡಯಾಲಿಸಿಸ್ ಯೂನಿಟ್ ಸಜ್ಜುಗೊಳಿಸಿದೆ.
ಡಿ.1ರಂದು(ನಾಳೆ) ಬೆಳಗ್ಗೆ 9 ಗಂಟೆಗೆ ನಡೆಯುವ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಂಞಂಬು , ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಇನ್ನಿತರ ಗಣ್ಯರು ಭಾಗವಹಿಸುವರು. ಮಾಜಿ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಮಂಜೂರು ಮಾಡಲಾದ 50 ಲಕ್ಷ ರೂ. ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಮಂಜೂರು ಮಾಡಲಾದ 52 ಲಕ್ಷ ರೂ. ಮೀಸಲಿರಿಸಿ ಯೂನಿಟ್ ನಿರ್ಮಿಸಲಾಗಿದೆ. ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಈ ಕಟ್ಟಡ ಉದ್ಘಾಟಿಸಿದ್ದರು.