HEALTH TIPS

ಚಲನಚಿತ್ರೋತ್ಸ: ಡೊಳ್ಳು ಆಯ್ಕೆ

               ಬೆಂಗಳೂರು: ಗೋವಾದಲ್ಲಿ ನವೆಂಬರ್‌ 20ರಿಂದ ಆರಂಭವಾಗಲಿರುವ 52ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 'ಚೊಚ್ಚಲ ಸ್ಪರ್ಧೆ' ವಿಭಾಗಕ್ಕೆ ಸಾಗರ್‌ ಪುರಾಣಿಕ್‌ ನಿರ್ದೇಶನದ ಕನ್ನಡ ಚಿತ್ರ 'ಡೊಳ್ಳು' ಆಯ್ಕೆಯಾಗಿದೆ.

                ಈ ವಿಭಾಗಕ್ಕೆ ಭಾರತದಿಂದ ಕೇವಲ ಎರಡು ಚಿತ್ರಗಳಷ್ಟೇ ಆಯ್ಕೆಯಾಗಿದ್ದು, ಇನ್ನೊಂದು ಸಿನಿಮಾ ಮರಾಠಿಯ 'ಫ್ಯುನರಲ್‌' ಆಗಿದೆ. ಈ ವಿಭಾಗದಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರನ್ನು ಗುರುತಿಸಲಾಗುತ್ತದೆ. ಇಲ್ಲಿಗೆ ಆಯ್ಕೆಯಾದ ಉಳಿದ ಎಲ್ಲವೂ ಬೇರೆ ರಾಷ್ಟ್ರದ ಸಿನಿಮಾಗಳಾಗಿವೆ. ನಗರೀಕರಣ ಹಾಗೂ ಹಳ್ಳಿಗಳಿಂದ ನಗರದತ್ತ ವಲಸೆಯು ಹೇಗೆ ಡೊಳ್ಳು ಕುಣಿತ ಸೇರಿದಂತೆ ಜಾನಪದ ಕಲೆಗಳನ್ನು ಅವನತಿಯತ್ತ ಕೊಂಡೊಯ್ಯುತ್ತಿವೆ ಎನ್ನುವ ಕುರಿತು ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾರ್ತಿಕ್‌ ಹಾಗೂ ನಿಧಿ ಹೆಗ್ಡೆ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರವನ್ನು ಪವನ್ ಒಡೆಯರ್‌ ಅವರ ಒಡೆಯರ್‌ ಮೂವೀಸ್‌ ನಿರ್ಮಾಣ ಮಾಡಿದೆ.

               ಈ ಕುರಿತು ಸಂತಸ ಹಂಚಿಕೊಂಡ ಸಾಗರ್‌ ಪುರಾಣಿಕ್‌, 'ಮೊನ್ನೆಯಷ್ಟೇ ಡೊಳ್ಳು ಸಿನಿಮಾ ಪನೋರಮ ವಿಭಾಗಕ್ಕೆ ಆಯ್ಕೆಯಾದ ಖುಷಿಯಲ್ಲಿ ನಾವಿದ್ದೆವು. ಇದೀಗ ಮತ್ತೊಮ್ಮೆ ಸಂಭ್ರಮ. ವಿಭಾಗದಲ್ಲಿ ಗೆದ್ದರೆ ಮತ್ತಷ್ಟು ಖುಷಿ. ಆದರೆ ಈ ವಿಭಾಗಕ್ಕೆ ಆಯ್ಕೆಯಾದ ಭಾರತದ ಎರಡೇ ಸಿನಿಮಾಗಳಲ್ಲಿ ಡೊಳ್ಳು ಕೂಡಾ ಒಂದು ಎನ್ನುವುದೇ ನನಗೆ ಹೆಮ್ಮೆ. ಚಿತ್ರ ಬಿಡುಗಡೆಯ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಅಂತರರಾಷ್ಟ್ರೀಯ ಮಟ್ಟದ ಪ್ರೇಕ್ಷಕರಿಗೆ ತಲುಪಿಸಿದ ಬಳಿಕ ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಚಿಂತನೆ ಇದೆ' ಎಂದರು.

            ಚಿತ್ರೋತ್ಸವದ ಪನೋರಮ ವಿಭಾಗಕ್ಕೂ 'ಡೊಳ್ಳು' ಆಯ್ಕೆಯಾಗಿತ್ತು. ಜೊತೆಗೆ ಮಂಸೋರೆ ನಿರ್ದೇಶನದ 'ಆಯಕ್ಟ್‌ 1978', ಪ್ರವೀಣ್‌ ಕೃಪಾಕರ್‌ ನಿರ್ದೇಶನದ 'ತಲೆದಂಡ' ಹಾಗೂ ಗಣೇಶ್‌ ಹೆಗಡೆ ಅವರು ನಿರ್ದೇಶಿಸಿರುವ 'ನೀಲಿ ಹಕ್ಕಿ' ಈ ವಿಭಾಗಕ್ಕೆ ಆಯ್ಕೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries