ನವೆದಹಲಿ: ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಡ್ರೈ ಫ್ರೂಟ್ಸ್ ವ್ಯಾಪಾರದಲ್ಲಿ ತೊಡಗಿರುವ ಜನರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶುಕ್ರವಾರ ತಿಳಿಸಿದೆ.
ಅಕ್ಟೋಬರ್ 28 ರಂದು ದಾಳಿ ನಡೆಸಲಾಗಿದ್ದು, ಈ ಗುಂಪು ಹಲವಾರು ವರ್ಷಗಳಿಂದ ಒಣ ಹಣ್ಣುಗಳ ಖರೀದಿಯನ್ನು ವಿಪರೀತವಾಗಿ ಹೆಚ್ಚಿಸುತಿತ್ತು ಎಂದು ಸಿಬಿಡಿಟಿ ಹೇಳಿದೆ. ವಶಕ್ಕೆ ಪಡೆಯಲಾದ ದಾಖಲಾತಿಯಲ್ಲಿ ಮಾರಾಟ ಮತ್ತು ಖರೀದಿ ನಡುವೆ ದೊಡ್ಡ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಾಳಿ ವೇಳೆ ರೂ. 40 ಕೋಟಿಯಷ್ಟು ಹೆಚ್ಚುವರಿ ದಾಸ್ತಾನು ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತು ಮತ್ತು ಸಂಗ್ರಹಿಸಿದ ಪುರಾವೆಗಳ ವಿಶ್ಲೇಷಣೆ ಪ್ರಕಾರ ಒಂದು ಗುಂಪು ಬೇನಾಮಿಯಾಗಿ ವ್ಯವಹಾರ ನಡೆಸುತಿತ್ತು ಎಂದು ಅದು ಹೇಳಿದೆ.
ಶೋಧ ಕಾರ್ಯದ ವೇಳೆ ಲೆಕ್ಕಕ್ಕೆ ಸಿಗದ 63 ಲಕ್ಷ ರೂ. ನಗದು ಮತ್ತು 2 ಕೋಟಿ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ ಮತ್ತು 200 ಕೋಟಿ ರೂ.ಗಿಂತ ಹೆಚ್ಚಿನ ಲೆಕ್ಕಕ್ಕೆ ಬಾರದ ಆದಾಯವನ್ನು ಪತ್ತೆಹಚ್ಚಿದೆ" ಎಂದು ಅದು ಹೇಳಿದೆ.