ತಿರುವನಂತಪುರ: ರಕ್ತ ಬ್ಯಾಂಕ್ ಗಳಲ್ಲಿ ತುರ್ತುಬಳಕೆಯ ರಕ್ತದ ಬೆಲೆಯನ್ನು ಅಮಾನವೀಯವಾಗಿ ಹೆಚ್ಚಿಸಿದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದ (ಆರ್‌ಸಿಸಿ) ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ. ಆಯೋಗದ ನೇತೃತ್ವವನ್ನು ನ್ಯಾಯಮೂರ್ತಿ ಆಂಟನಿ ಡೊಮಿನಿಕ್ ವಹಿಸಿದ್ದಾರೆ.
ಬೆಲೆ ಏರಿಕೆಯ ಸುತ್ತಲಿನ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ನಾಲ್ಕು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಆಯೋಗವು ಆರ್‌ಸಿಸಿ ನಿರ್ದೇಶಕರನ್ನು ಕೇಳಿದೆ. ಪ್ರಸ್ತುತ ಯೂನಿಟ್ ಒಂದಕ್ಕೆ ಬೆಲೆ 1960 ರೂ. ನಿಗದಿಪಡಿಸಲಾಗಿದೆ.
2019ರಲ್ಲಿ ಸೆಲ್‌ಗಳ ಬೆಲೆ 600 ರೂ. ಮಾತ್ರವಿತ್ತು. 2020 ರಲ್ಲಿ ಇದನ್ನು ರೂ. 1700 ರೂ.ಗೆ ಏಕಾಏಕಿ ಹೆಚ್ಚಿಸಲಾಗಿತ್ತು. ಆದರೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ನಲ್ಲಿ 600 ರೂ. ಇದ್ದರೆ ಜನರಲ್ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.