HEALTH TIPS

2020ರಲ್ಲಿ ರೈತರಿಗಿಂತ ಹೆಚ್ಚು ಉದ್ಯಮಿಗಳ ಆತ್ಮಹತ್ಯೆ: ಎನ್‌ಸಿಆರ್‌ಬಿ

                  ನವದೆಹಲಿ ಕೋವಿಡ್ ಪಿಡುಗಿಗೆ ತುತ್ತಾಗಿದ್ದ 2020ರಲ್ಲಿ ದೇಶದಲ್ಲಿ ರೈತರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ವು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

             2020ರಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು 2019ರ ಸಂಖ್ಯೆ (9,052)ಗೆ ಹೋಲಿಸಿದರೆ ಶೇ.29ರಷ್ಟು ಏರಿಕೆಯಾಗಿದೆ. 2020ರಲ್ಲಿ 10,677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,ಇದು ಉದ್ಯಮಿಗಳ ಸಂಖ್ಯೆಗಿಂತ 1039ರಷ್ಟು ಕಡಿಮೆಯಾಗಿದೆ.

2014 ಮತ್ತು 2019ರ ನಡುವೆ ಉದ್ಯಮಿಗಳಿಗಿಂತ ರೈತರ ಆತ್ಮಹತ್ಯೆ ಪ್ರಕರಣಗಳು ಸರಾಸರಿ ಕನಿಷ್ಠ 2,000-3,000ದಷ್ಟು ಹೆಚ್ಚಾಗಿದ್ದವು ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ತೋರಿಸಿವೆ.

             ಆದರೆ ಇತ್ತೀಚಿನ ವರ್ಷಗಳಲ್ಲಿ ಇವೆರಡೂ ವರ್ಗಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. 2017ರಲ್ಲಿ 7,800ಕ್ಕೂ ಅಧಿಕ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ ಈ ಸಂಖ್ಯೆ 2018ರಲ್ಲಿ 9,000 ದಾಟಿತ್ತು. 2020ರಲ್ಲಿ 11,700 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಅವಧಿಯಲ್ಲಿ 2017ರಲ್ಲಿ 10700 ರಷ್ಟಿದ್ದ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 2018 ಮತ್ತು 2019ರಲ್ಲಿ 10,300ರ ಆಸುಪಾಸಿಗೆ ಇಳಿದಿತ್ತಾದರೂ 2020ರಲ್ಲಿ 10,700ಕ್ಕೆ ಮತ್ತೆ ಏರಿಕೆಯಾಗಿತ್ತು.

ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳಲ್ಲಿ ಹೆಚ್ಚಿನವರು ಪುರುಷರು (ಶೇ.93) ಆಗಿದ್ದಾರೆ. ಹೆಚ್ಚಿನವರು ಬೀದಿ ಮಾರಾಟಗಾರರು (ಶೇ.36) ಮತ್ತು ವ್ಯಾಪಾರಿಗಳು (ಶೇ.37). ಇವರೆಲ್ಲ ಹೆಚ್ಚು ಶ್ರೀಮಂತ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

             2020ರಲ್ಲಿ ಕರ್ನಾಟಕದಲ್ಲಿ ಗರಿಷ್ಠ 1,772 ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದು,2019ಕ್ಕೆ ಹೋಲಿಸಿದರೆ ಶೇ.103ರಷ್ಟು ಏರಿಕೆಯಾಗಿದೆ. ಆ ವರ್ಷ ಕೇವಲ 875 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (1,610) ಮತ್ತು ತಮಿಳುನಾಡು (1,447) ಇವೆ. 2019ಕ್ಕೆ ಹೋಲಿಸಿದರೆ ಇವೆರಡೂ ರಾಜ್ಯಗಳಲ್ಲಿ ಉದ್ಯಮಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಅನುಕ್ರಮವಾಗಿ ಶೇ.25 ಮತ್ತು ಶೇ.36ರಷ್ಟು ಏರಿಕೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಒಟ್ಟು ಉದ್ಯಮಿಗಳ ಪೈಕಿ ಸುಮಾರು ಶೇ.46ರಷ್ಟು ಪ್ರಕರಣಗಳು ಈ ಮೂರು ರಾಜ್ಯಗಳಲ್ಲಿಯೇ ನಡೆದಿವೆ.

ಆದಾಗ್ಯೂ ನಿರುದ್ಯೋಗಿಗಳು (15,652) ಮತ್ತು ದಿನಗೂಲಿ ಕಾರ್ಮಿಕರಿಗೆ (37,666) ಹೋಲಿಸಿದರೆ ಉದ್ಯಮಿಗಳ ಆತ್ಮಹತ್ಯೆಗಳ ಸಂಖ್ಯೆ ತುಂಬ ಕಡಿಮೆಯೇ ಇದೆ.

            ಎನ್‌ಸಿಆರ್‌ಬಿ ವರದಿಯಂತೆ ಆತ್ಮಹತ್ಯೆಗಳಿಗೆ ಕೋವಿಡ್ ಸಾಂಕ್ರಾಮಿಕ ಪ್ರಮುಖ ಕಾರಣವಾಗಿತ್ತು. 2020ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.3ರಷ್ಟು ಏರಿಕೆಯಾಗಿದ್ದರೆ,ಉದ್ಯಮಿಗಳಲಿ ಇಂತಹ ಪ್ರಕರಣಗಳು ಶೇ.29ರಷ್ಟು ಏರಿಕೆಯಾಗಿದ್ದವು.

2020ರಲ್ಲಿ ಕೋವಿಡ್ ಸಾಂಕ್ರಾಮಿಕವು ಕೃಷಿ ಕ್ಷೇತ್ರಕ್ಕಿಂತ ಕೃಷಿಯೇತರ ಕ್ಷೇತ್ರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡಿತ್ತು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries