ಮುಳ್ಳೇರಿಯ: "ಬ್ಲೀಟ್ 2021" ಎಂಬ ಹೆಸರಿನಲ್ಲಿ ಮೇಕೆಸಂತೆ ಬೆಳ್ಳೂರು ನೆಟ್ಟಣಿಗೆಯಲ್ಲಿ ಜರುಗಿತು.
ಕುಟುಂಬಶ್ರೀ ಜಿಲ್ಲಾ ಮಿಷನ್ ಮತ್ತು ಬೆಳ್ಳೂರು ಗ್ರಾಮಪಂಚಾಯತಿ ಕುಟುಂಬಶ್ರೀ ಸಿ.ಡಿ.ಎಸ್. ವತಿಯಿಂದ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಷಾನವಾಝ್ ಪಾದೂರು ಉದ್ಘಾಟಿಸಿದರು. ಮೊದಲ ಮಾರಾಟ ಅಂಗವಾಗಿ ಕುಟುಂಬಶ್ರೀ ಸದಸ್ಯೆ ಕಮಲಾ ಅವರಿಗೆ ಮೇಕೆ ವಿತರಿಸಲಾಯಿತು. ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಶ್ರೀಧರ ಆಡುಗ್ರಾಮ ಯೋಜನೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಕೆ.ಗೀತಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ರೈ, ಜಯಕುಮಾರ್, ಬ್ಲಾಕ್ ಪಂಚಾಯತಿ ಸದಸ್ಯ ರವಿಪ್ರಸಾದ್, ವಾರ್ಡ್ ಸದಸ್ಯರಾದ ವೀರೇಂದ್ರ ಕುಮಾರ್, ಬೇಬಿ, ಭಾಗೀರತಿ, ಶ್ರೀಪತಿ ಕಡಂಬಳಿತ್ತಾಯ, ದುರ್ಗಾದೇವಿ, ಕುಟುಂಬಶ್ರೀ ಎ.ಡಿ.ಎಂ.ಸಿ.ಗಳಾದ ಹರಿದಾಸ್, ಸಿ.ಎಚ್.ಇಕ್ಬಾಲ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ನವಾಝ್ ಮೊದಲಾದವರು ಉಪಸ್ಥಿತರಿದ್ದರು. ಕುಟುಂಬಶ್ರೀ ಅಧ್ಯಕ್ಷೆ ಮಾಲಿನಿ ಸ್ವಾಗತಿಸಿ, ಮೆಂಬರ್ ಸೆಕ್ರೆಟರಿ ಅನಿಲ್ ಕುಮಾರ್ ವಂದಿಸಿದರು.