ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು ಆಗಸ್ಟ್ 31, 2024 ಅಥವಾ ಮುಂದಿನ ಆದೇಶದವರೆಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು ಆಗಸ್ಟ್ 31, 2024 ಅಥವಾ ಮುಂದಿನ ಆದೇಶದವರೆಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಜಾರ್ಖಂಡ್ ಕೇಡರ್ ನ 1988ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಪ್ರಧಾನ್, ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ-ಎನ್ ಡಿಆರ್ ಎಫ್ ಮಹಾನಿರ್ದೇಶಕ ಜವಾಬ್ದಾರಿ ಹೊಂದಿದ್ದರೂ ಹೆಚ್ಚುವರಿಯಾಗಿ ಎನ್ ಸಿಬಿ ಮುಖ್ಯಸ್ಥ ಸ್ಥಾನವನ್ನು ನೀಡಲಾಗಿದೆ.
ರಾಕೇಶ್ ಅಸ್ಥಾನ ದೆಹಲಿ ಪೊಲೀಸ್ ಕಮೀಷನರ್ ಆಗಿ ನೇಮಕವಾದ ನಂತರ ಎನ್ ಸಿಬಿ ಮಹಾನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪೂರ್ಣ ಅವಧಿ ಆಧಾರದ ಮೇಲೆ ಎನ್ ಸಿಬಿ ಮುಖ್ಯಸ್ಥರಾಗಿ ಪ್ರಧಾನ್ ಅವರನ್ನು ಸಂಪುಟದ ನೇಮಕಾತಿ ಸಮಿತಿ ಬುಧವಾರ ನೇಮಕ ಮಾಡಿ ಆದೇಶಿಸಿದೆ.
ಎನ್ ಡಿಆರ್ ಎಫ್ ಮಹಾನಿರ್ದೇಶಕ ಹುದ್ದೆಯನ್ನು ಕೂಡಲೇ ತೊರೆಯುವಂತೆ ಕೇಂದ್ರ ಗೃಹ ಸಚಿವಾಲಯ ಪ್ರಧಾನ್ ಅವರಿಗೆ ಮನವಿ ಮಾಡಿದೆ.