ಸಿಯೋಲ್:ಉತ್ತರ ಕೊರಿಯಾದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದ್ದು, ಮುಂದಿನ ನಾಲ್ಕು ವರ್ಷ ಕಡಿಮೆ ಆಹಾರ ಸೇವಿಸುವಂತೆ ದೇಶದ ಜನತೆಗೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮನವಿ ಮಾಡಿದ್ದಾರೆ.
ಈಗಾಲೇ ಕೋವಿಡ್ ನಿಂದ ಭಾರೀ ಆರ್ಥಿಕ ಹೊಡೆತ ಅನುಭವಿಸಿದ್ದ ಉ.ಕೊರಿಯಾಗೆ ಇತ್ತೀಚೆಗೆ ಸುರಿದ ಮಳೆ ಕೂಡ ಗಾಯದ ಮೇಲೆ ಬರೆ ಎಳೆದಿದೆ. ಭಾರೀ ಮಳೆಯಿಂದಾಗಿ ಬೆಳೆಗಳು ನೆಲಕಚ್ಚಿವೆ. ಇದರಿಂದಾಗಿ ಆಹಾರ ಕೊರತೆ ಎದುರಾಗಿದೆ.
ಅಷ್ಟೇ ಅಲ್ಲ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕೂಡ ಇಳಿಮುಖವಾಗಿದ್ದರಿಂದ ಹೊರ ದೇಶಗಳಿಂದಲೂ ಆಹಾರ ಪದಾರ್ಥಗಳ ಪೂರೈಕೆ ಮಾಡಿಕೊಳ್ಳಲು ಅಸಾಧ್ಯವಾಗುತ್ತಿದೆ. ಹಾಗಾಗಿ 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಕಿಮ್ ಜಾಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೋವಿಡ್ ಸೋಂಕು ತಡೆಗಟ್ಟುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉ.ಕೋರಿಯಾ ಕಳೆದ ಜನವರಿಯಲ್ಲಿ ಚೀನಾ ಜತೆಗೆ ಹೊಂದಿಕೊಂಡಿದ್ದ ಗಡಿಯನ್ನು ಮುಚ್ಚಿತ್ತು. ಆದರೆ ಈ ನಿರ್ಧಾರದಿಂದಾಗಿ ಉ.ಕೋರಿಯಾ ಆರ್ಥಿಕತೆ ಮೇಲೆ ಭಾರೀ ಹೊಡೆತ ಬಿದ್ದಿದೆ.
‘2025ರಲ್ಲಿ ಚೀನಾ ಜತೆಗಿನ ಗಡಿಯನ್ನು ಪುನಾರಂಭಿಸುಲಾಗುವುದು, ಅಲ್ಲಿಯವರೆಗೆ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂದು’ ಕಿಮ್ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.