ಕೋಲ್ಕತ್ತಾ: ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟರ್ ಗಳು ಅದ್ಭುತ ಪ್ರದರ್ಶನ ನೀಡಿದ್ದು ನಿಗದಿತ ಓವರ್ ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತ್ತು. 185 ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 111 ರನ್ ಗಳಿಗೆ ಆಲೌಟ್ ಆಗಿದ್ದು 73 ರನ್ ಗಳಿಗೆ ಸೋಲು ಅನುಭವಿಸಿದೆ.
ಭಾರತ ಪರ ರೋಹಿತ್ ಶರ್ಮಾ ಆರಂಭಿಕವಾಗಿ ಅಬ್ಬರಿಸಿದರು. 31 ಎಸೆತಗಳಲ್ಲಿ 56 ರನ್ ಬಾರಿಸಿದ್ದು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇನ್ನು ಇಶಾನ್ ಕಿಶಾನ್ 29, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20, ದೀಪಕ್ ಚಹಾರ್ ಅಜೇಯ 21 ರನ್ ಬಾರಿಸಿದ್ದಾರೆ.
ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಮಿಚೆಲ್ ಸ್ಯಾಂಟ್ನರ್ 3, ಟ್ರೆಂಟ್ ಬೌಲ್ಟ್, ಮಿಲ್ನೆ, ಫರ್ಗ್ಯುಸನ್ ಮತ್ತು ಸೋದಿ ತಲಾ 1 ವಿಕೆಟ್ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ಪರ ಮಾರ್ಟಿನ್ ಗಪ್ಟಿಲ್ 51, ಟಿಮ್ ಸೀಫರ್ಟ್ 17 ಮತ್ತು ಫರ್ಗ್ಯುಸನ್ 14 ರನ್ ಪೇರಿಸಿದ್ದಾರೆ.
ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್ 3, ಹರ್ಷಲ್ ಪಟೇಲ್ 2, ದೀಪಕ್ ಚಹಾರ್, ಚಹಾಲ್ ಮತ್ತು ವೆಂಕಟೇಶ್ ಅಯ್ಯರ್ ತಲಾ 1 ವಿಕೆಟ್ ಪಡೆದಿದ್ದಾರೆ.