ತಿರುವನಂತಪುರ: ಅಕ್ಟೋಬರ್ 16ರಿಂದ 18ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹಕ್ಕೆ ಒಟ್ಟು 21,941 ಹೆಕ್ಟೇರ್ ಬೆಳೆ ನಾಶವಾಗಿದೆ. ವರದಿ ಪ್ರಕಾರ ರೈತರು 216.3 ಕೋಟಿ ರೂ.ನಷ್ಟ ಅನುಭವಿಸಿದ್ದಾರೆ. ತ್ರಿಶೂರ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ.
ಹಾನಿ ಪರಿಹಾರಕ್ಕಾಗಿ ಒಟ್ಟು 66,322 ರೈತರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15 ಆಗಿದೆ. ಅಂದಾಜಿನ ಪ್ರಕಾರ, ತ್ರಿಶೂರ್ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. 6779 ರೈತರ 11,967 ಹೆಕ್ಟೇರ್ ಬೆಳೆ ನಾಶವಾಗಿದೆ. ಅಲಪ್ಪುಳದಲ್ಲಿ 11,049 ರೈತರಿಗೆ ಸೇರಿದ 1648 ಹೆಕ್ಟೇರ್ ಭೂಮಿ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ 9,208 ರೈತರ 2,223 ಹೆಕ್ಟೇರ್ ಭೂಮಿ ನಾಶವಾಗಿದೆ.
ಪಾಲಕ್ಕಾಡ್ 1589 ಹೆಕ್ಟೇರ್, ಎರ್ನಾಕುಲಂ 1845 ಹೆಕ್ಟೇರ್, ಇಡುಕ್ಕಿ 245 ಹೆಕ್ಟೇರ್, ಪತ್ತನಂತಿಟ್ಟ 652, ತಿರುವನಂತಪುರಂ 557, ಮಲಪ್ಪುರಂ 618, ಕೊಲ್ಲಂ 392, ಕೋಝಿಕ್ಕೋಡ್ 50, ಕಾಸರಗೋಡು 52, ಕಣ್ಣೂರು 96 ಮತ್ತು ವಯನಾಡ್ 2 ಹೆಕ್ಟೇರ್ ಹಾನಿಗೊಳಗಾಗಿದೆ. ಹಾನಿಯಾದ ಹಿನ್ನೆಲೆಯಲ್ಲಿ ರೈತರಿಂದ ಅರ್ಜಿಗಳ ಸ್ಥಳ ಪರಿಶೀಲನೆ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳೆ ನಷ್ಟ ಅಂತ ಕೊಡೋದಿಲ್ಲ ಆಗಿದೆ ಅಷ್ಟೆ
ಪ್ರತ್ಯುತ್ತರಅಳಿಸಿ