ಬದಿಯಡ್ಕ: ಕುಂಬ್ಡಾಜೆ ಸ್ಮಾರ್ಟ್ ವಿಲ್ಲೇಜ್ ಆಫೀಸ್ ಉದ್ಘಾಟನೆ ನ.25ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ. ಕಂದಾಯ ಸಚಿವ ಕೆ.ರಾಜನ್ ಉದ್ಘಾಟಿಸುವರು.
ಈ ಸಂಬಂಧ ಸಂಘಟಕ ಸಮಿತಿ ರಚನೆ ಸಭೆ ಜರುಗಿತು. ಕುಂಬ್ಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸಳಿಕೆ ಅಧ್ಯಕ್ಷತೆ ವಹಿಸಿದ್ದರು. ಕಾಸರಗೊಡು ತಹಸೀಲ್ದಾರ್ ಎ.ವಿ.ರಾಜನ್, ವಾರ್ಡ್ ಸದಸ್ಯ ಹರೀಶ್ ಗೋಸಾಡ, ಸಹಾಯಕ ತಹಸೀಲ್ದಾರ್ ರಮೇಶನ್ ಪೆÇಯಿನಾಚಿ, ವಿವಿಧ ರಾಜಕೀಯ ಪಕ್ಷಗಳ ನೇತಾರರು ಉಪಸ್ಥಿತರಿದ್ದರು.
ಸಮಿತಿ ಪದಾಧಿಕಾರಿಗಳು: ಅಧ್ಯಕ್ಷ- ಶಾಸಕ ಎನ್.ಎ.ನೆಲ್ಲಿಕುನ್ನು, ಉಪಾಧ್ಯಕ್ಷ- ಸಂಚಾಲಕ-ಕುಂಬ್ಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸಳಿಕೆ, ಸಹಸಂಚಾಲಕ- ಕಾಸರಗೋಡು ತಹಸೀಲ್ದಾರ್ ಎ.ವಿ.ರಾಜನ್, ಸಹಸಂಚಾಲಕರು: ಕುಂಬ್ಡಾಜೆ ಗ್ರಾಮಾಧಿಕಾರಿ ಎಸ್.ಲೀಲಾ, ನಿರ್ಮಿತಿ ಕೇಂದ್ರ ಅಬ್ದುಲ್ ರಹಮಾನ್, ಕೋಶಾಧಿಕಾರಿ- ವಾರ್ಡ್ ಸದಸ್ಯ ಹರೀಶ್ ಗೋಸಾಡ ಆಯ್ಕೆಯಾಗಿರುವರು.