ಕಾಸರಗೋಡು: ಕೇಂದ್ರ ಸಮಾಜನೀತಿ, ನೌಕರಿ ಸಹಸಚಿವ ಎ.ನಾರಾಯಣ ಸ್ವಾಮಿ ನ.25ರಂದು ಜಿಲ್ಲೆಗೆ ಆಗಮಿಸುವರು. ಅಂದು ಬೆಳಗ್ಗೆ 10.30ಕ್ಕೆ ಚೆಮ್ನಾಡು ಕಂಝ್ ಸಭಾಂಗಣದಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆಯ ಅಂಗವಾಗಿ ನಡೆಯುವ ಹಿರಿಯ ಪ್ರಜೆಗಳಿಗೆ ಸಹಾಯ ಉಪಕರಣ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸುವರು. ಕೇಂದ್ರ ವಿದೇಶಾಂಗ ಸಹಸಚಿವ ವಿ.ಮುರಳೀಧರನ್ ಮುಖ್ಯ ಅತಿಥಿಯಾಗಿರುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಸಿ.ಎಚ್.ಕುಂಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್ ಮೊದಲಾದವರು ಉಪಸ್ಥಿತರಿರುವರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಸ್ವಾಗತಿಸುವರು.
ಸಮಾರಂಭದಲ್ಲಿ 910 ಮಂದಿ ಫಲಾನುಭವಿಗಳಿಗೆ 50 ಲಕ್ಷ ರೂ. ಮೌಲ್ಯದ ಸಹಾಯ ಉಪಕರಣಗಳನ್ನು ವಿತರಿಸಲಾಗುವುದು.