HEALTH TIPS

ಕರಾವಳಿ ಪೋಲೀಸ್ ಠಾಣೆ: ವಿವಿಧ ಹುದ್ದೆಗಳಿಗೆ 29ರಂದು ಸಂದರ್ಶನ

                ಕಾಸರಗೋಡು: ನಗರದ ತಳಂಗರೆಯ ಕರಾವಳಿ ಪೋಲೀಸ್ ಠಾಣೆಯಲ್ಲಿ ಬೋಟು ಚಾಲಕ, ಬೋಟು ಸ್ರಾಂಕ್, ಬೋಟು ಲಾಸ್ಕರ್, ಸ್ಪೆಷಲ್ ಮರೈನ್ ಹೋಂ ಗಾರ್ಡ್ ಎಂಬ ಹುದ್ದೆಗಳು ತೆರವಾಗಿದ್ದು, ಈ ಸಂಬಂಧ ಸಂದರ್ಶನ ನ.29ರಂದು ಬೆಳಗ್ಗೆ 9.30ಕ್ಕೆ ತಳಂಗರೆ ಕರಾವಳಿ ಪೊಲೀಸ್ ಠಾಣೆಯಲ್ಲಿ ನಡೆಯಲಿದೆ. ಇಂಡಿಯನ್ ನೇವಿ/ ಕೋಸ್ಟ್ ಗಾರ್ಡ್/ ಬಿ.ಎಸ್.ಇ.ಎಫ್/ ಸಿ.ಆರ್.ಪಿ.ಎಫ್ ಇತ್ಯಾದಿ ಯಾ ತತ್ಸಮಾನ ಸೇನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಂದಿ ಯಾ ನಿಗದಿತ ಅರ್ಹತೆ , ವೃತ್ತಿ ಪರಿಚಯ ಹೊಂದಿರುವ ಮಂದಿ ಭಾಗವಹಿಸಬಹುದು. 50 ವರ್ಷ ಪ್ರಾಯ ಮೀರಿರಬಾರದು. ಅರ್ಜಿದಾರರು ಸಮುದ್ರದಲ್ಲಿ 500 ಮೀಟರ್ ಈಜು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿದೆ. ಮಹಿಳೆಯರು, ವಿಕಲಚೇತನರು, ಅಂಟುರೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಆಸಕ್ತರು ಗುರುತುಚೀಟಿ, 2 ಫೆÇಟೋ, ಅರ್ಹತಾಪತ್ರಗಳು, ದೃಷ್ಟಿ ಪರೀಕ್ಷೆಯ ದಾಖಲಾತಿ, ಮೆಡಿಕಲ್ ಸರ್ಟಿಫೀಕೆಟ್ ಇತ್ಯಾದಿಗಳ ಸಹಿತ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 04994-255461 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries