ಮ್ಯಾಸಚೂಸೆಟ್ಸ್/ಅಮೆರಿಕ: ಕೊರೋನಾ ಹೊಸ ರೂಪಾಂತರವಾದ ಒಮಿಕ್ರಾನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಭೀತಿ ಸೃಷ್ಟಿಸಿದೆ.
ಒಮಿಕ್ರಾನ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ದೇಶಗಳು ಪ್ರಯಾಣ ನಿರ್ಬಂಧವನ್ನು ಜಾರಿಗೆ ತಂದಿವೆ. ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡರ್ನಾ, ಒಮಿಕ್ರಾನ್ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.
ಒಮಿಕ್ರಾನ್ ರೂಪಾಂತರದ ವಿಶೇಷ ಲಸಿಕೆ (ಒಮಿಕ್ರಾನ್ ಸ್ಪೆಸಿಫಿಕ್) 2 ರಿಂದ 3 ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಮಾಡರ್ನ ವ್ಯಾಕ್ಸಿನ್ ಕಂಪನಿ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕರೋನಾದ ಹೊಸ ರೂಪಾಂತರದಿಂದಾಗಿ ಜಗತ್ತು ಮತ್ತೆ ಸಮಸ್ಯೆಗೆ ಸಿಲುಕಿದೆ. ಈ ಹೊಸ ರೂಪಾಂತರವನ್ನು ನಿಯಂತ್ರಿಸುವಲ್ಲಿ ಅಸ್ತಿತ್ವದಲ್ಲಿರುವ ಲಸಿಕೆ ಪರಿಣಾಮಕಾರಿವಾಗಲಿದೆ ಅನ್ನೋದು ಇನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ.
ಮಾಡರ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಪಾಲ್ ಬರ್ಟನ್ ನೀಡಿರುವ ಹೇಳಿಕೆ ಪ್ರಕಾರ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಗೆ ಪ್ರತ್ಯೇಕ ಲಸಿಕೆ ಅಗತ್ಯಬಿದ್ದರೆ, ಅದು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದ್ದು, ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ರೂಪಾಂತರ ಮತ್ತು ಲಸಿಕೆ ದಕ್ಷತೆಯ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಲಸಿಕೆ ಹಾಕಿದ್ದರೂ, ಈ ರೂಪಾಂತರಿ ಸೋಂಕಿತರಿಂದ ಮಾದರಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಅಂತಾ ತಿಳಿಸಿದರು.