ಕಾಸರಗೋಡು: ಚುನಾವಣೆ ಆಯೋಗ್ ಸ್ಪೆಷ್ಯಲ್ ಸಮ್ಮರಿ ರಿವಿಷನ್-2022 ಪ್ರಕಾರ ಮತದಾತರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರ್ಪಡೆಗೊಳಿಸಲು ನ.30 ವರೆಗೆ ಅರ್ಜಿ ಸಲ್ಲಿಸಲು ಅವಕಾಶಗಳಿವೆ. 2022 ಜ.1ರಂದು 18 ವಯಸ್ಸು ಪೂರ್ತಿಗೊಂಡಿರುವ ಎಲ್ಲರಿಗೂ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಬಹುದಾಗಿದೆ. ಮೊಬೈಲ್ ಫೆÇೀನ್ ನಲ್ಲಿ ಮತದಾತರ ಸಹಾಯವಾಣಿ ಆಪ್(ವಿ.ಎಚ್.ಎ.) ಡೌನ್ ಲೋಡ್ ನಡೆಸಿದರೆ ಬಲುಸುಲಭವಾಗಿ ಹೆಸರು ಸೇರ್ಪಡೆ ನಡೆಸಬಹುದು. ಜೊತೆಗೆ ತಿತಿತಿ.ಟಿvsಠಿ.iಟಿ ಎಂಬ ವೆಬ್ ಸೈಟ್ ಮೂಲಕವೂ ಆನ್ ಲೈನ್ ರೂಪದಲ್ಲಿ ಹೆಸರು ಸೇರ್ಪಡೆಗೆ ಅರ್ಜಿ, ಲೋಪದೋಷಗಳಿದ್ದಲ್ಲಿ ತಿದ್ದುಪಡಿಗೆ ಅರ್ಜಿ ನ.30 ವರೆಗೆ ಸಲ್ಲಿಕೆ ಸಾಧ್ಯವಿದೆ. 30 ವರೆಗೆ ಲಭಿಸುವ ಅರ್ಜಿಗಳ ಬಗ್ಗೆ ತೀರ್ಮಾನ ಕೈಗೊಂಡು 2022 ಜ.5ರಂದು ಅಂತಿಮ ಮತದಾತರ ಪಟ್ಟಿ ಪ್ರಕಟಿಸಲಾಗುವುದು. ಅರ್ಹರಾದ ಎಲ್ಲರೂ ಈ ಅವಕಾಶದ ಸದುಪಯೋಗ ಪಡಿಸುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಅವರು ವಿನಂತಿಸಿರುವರು.