ಕಾನ್ಪುರ: ಜಿಲ್ಲೆಯಲ್ಲಿ ಹೊಸದಾಗಿ 30 ಜನರಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕಾನ್ಪುರದಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 66ಕ್ಕೇರಿದೆ. ಸೋಂಕಿತರಲ್ಲಿ 45 ಪುರುಷರು ಹಾಗೂ 21 ಮಹಿಳೆಯರು ಇದ್ದಾರೆ.
ಕಾನ್ಪುರ: ಜಿಲ್ಲೆಯಲ್ಲಿ ಹೊಸದಾಗಿ 30 ಜನರಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕಾನ್ಪುರದಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 66ಕ್ಕೇರಿದೆ. ಸೋಂಕಿತರಲ್ಲಿ 45 ಪುರುಷರು ಹಾಗೂ 21 ಮಹಿಳೆಯರು ಇದ್ದಾರೆ.
ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಯೊಬ್ಬರಿಗೆ ಅಕ್ಟೋಬರ್ 23 ರಂದು ಸೋಂಕು ದೃಢಪಟ್ಟಿತ್ತು. ಇದು ಜಿಲ್ಲೆಯಲ್ಲಿ ವರದಿಯಾದ ಮೊದಲ ಪ್ರಕರಣವೂ ಹೌದು.
ʼಕಾನ್ಪುರದಲ್ಲಿ 30 ಜನರಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆʼ ಎಂದು ಜಿಲ್ಲಾಧಿಕಾರಿ ವಿಶಾಖ್ ಜಿ. ಅಯ್ಯರ್ ತಿಳಿಸಿದ್ದಾರೆ.
ಐಎಎಫ್ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ, ಲಖನೌನಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯದ (ಕೆಜಿಎಂಯು) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವುಗಳಲ್ಲಿ ಮೂವತ್ತು ಜನರಿಗೆ ಸೋಂಕು ಖಚಿತವಾಗಿದೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಝೀಕಾ ಸೊಳ್ಳಿಗಳಿಂದ ಹರಡುವ ವೈರಸ್ ಆಗಿದ್ದು, ಸೊಳ್ಳೆಗಳನ್ನು ಇಲ್ಲವಾಗಿಸುವುದೇ ಸುರಕ್ಷಿತ ಕ್ರಮವಾಗಿದೆ ಎಂದೂ ಸಲಹೆ ನೀಡಿದ್ದಾರೆ.
ಸೋಂಕು ನಿಯಂತ್ರಣದ ಸಲುವಾಗಿ ಆರೋಗ್ಯ ಕಾರ್ಯಕರ್ತರು ಸ್ಯಾನಿಟೈಸೇಷನ್ ಕಾರ್ಯ ಮತ್ತು ಜ್ವರ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ವೈರಸ್ ಹರಡದಂತೆ ನಿಗಾ ಇಡುವಂತೆ ಮತ್ತು ಮನೆಮನೆವರೆಗೆ ತೆರಳಿ ಝೀಕಾ ವೈರಸ್ ಸೋಂಕು ಪರೀಕ್ಷೆ, ಸ್ಯಾನಿಟೈಸೇಷನ್ ಕಾರ್ಯ ನಡೆಸುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚನೆ ನೀಡಿದ್ದಾರೆ.